ಖತೀಜಾ ಜಾಸ್ಮಿನ್ ಗೆ ನ್ಯಾಯಕ್ಕಾಗಿ ಆಗ್ರಹಿಸಿ ಬಿತ್ತಿ ಪತ್ರ ಪ್ರದರ್ಶಿಸಿ ಅವಿಭಜಿತ ದಕ ಜಿಲ್ಲಾದ್ಯಂತ ವಿಮ್ ಪ್ರತಿಭಟನೆ

Prasthutha|

ಜೂ, 11: ಗರ್ಭಿಣಿ ಮಹಿಳೆ ಖತೀಜಾ ಜಾಸ್ಮಿನ್ ಗೆ ಚಿಕಿತ್ಸೆ ನಿರಾಕರಿಸಿ 6 ಆಸ್ಪತ್ರೆಗಳನ್ನು ಅಲೆದಾಡಿಸಲು ಕಾರಣರಾದ ಡಾ. ಪ್ರಿಯಾ ಬಲ್ಲಾಳ್ ಮತ್ತು ಇತರರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ ಮೆಂಟ್ (WIM) ಮಹಿಳೆಯರಿಂದ ಮನೆಯಲ್ಲಿ ಬಿತ್ತಿ ಪತ್ರ ಪ್ರದರ್ಶಿಸಿ ಅವಿಭಜಿತ ದಕ (ಮಂಗಳೂರು) ಮತ್ತು ಉಡುಪಿ ಜಿಲ್ಲಾದ್ಯಂತ ಸುಮಾರು 150 ಹೆಚ್ಚು ಕಡೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

- Advertisement -

ಇಂದು ಜಾಸ್ಮಿನ್ ಳಿಗೆ ನಾಳೆ ನಮ್ಮ ಮನೆ ಹುಡುಗಿಗೆ, ಎಲ್ಲಾ ವೈದ್ಯರು ತಪ್ಪಿತಸ್ಥರಲ್ಲ ಅಪರಾಧಿ ವೈದ್ಯರು ನಮ್ಮವರಲ್ಲ ಜನರಿಗೆ ನ್ಯಾಯ ದೊರೆಯಲಿ, ಚಿಕಿತ್ಸೆ ನಿರಾಕರಣೆ ಜೀವಿಸುವ ಹಕ್ಕಿನ ನಿರಾಕರಣೆ, ಜಾಸ್ಮಿನ್ ಪ್ರಕರಣದ ತಪ್ಪಿತಸ್ಥ ವೈದ್ಯರನ್ನು ಜೈಲಿಗಟ್ಟಿ, ಭವಿಷ್ಯದಲ್ಲಿ ಇದು ಮರುಕಳಿಸುವುದನ್ನು ತಡೆಯೋಣ, ಪ್ರಾಣ ಕಾಪಾಡಬೇಕಾದವರು ಪ್ರಾಣ ತೆಗೆಯಹೊರಟವರು, ಮೆಡಿಕಲ್ ಮಾಫಿಯಾ ವಿರುದ್ಧ ಎದ್ದೇಳೋಣ, ರೋಗಿಗಳನ್ನು ಚಿಕಿತ್ಸಿಸುವುದು ವೈದ್ಯರ ಕರ್ತವ್ಯ ಮೆಡಿಕಲ್ ದಂಧೆ ಸಾರ್ವಜನಿಕ ಪ್ರಾಣವನ್ನು ಅಪಾಯಕ್ಕೊಡ್ಡುತ್ತಿದೆ ಈ ಅನ್ಯಾಯದ ವಿರುದ್ಧ ಎದ್ದೇಳೋಣ, ಮೆಡಿಕಲ್ ಮಾಫಿಯಾ ವಿರುದ್ಧ ಪ್ರತೀ ಮನೆಯಂಗಳದಲ್ಲಿ ದ್ವನಿಹೊರಡಿಸೋಣ, ಪ್ರಾಣ ಹಿಂಡುವ ವೈದ್ಯರನ್ನು ಜೈಲಿಗಟ್ಟೋಣ ಪ್ರಾಣ ರಕ್ಷಕ ವೈದ್ಯರ ಮಾನ ಉಳಿಸೋಣ, ತಪ್ಪಿತಸ್ಥರ ವೈದ್ಯರ ಬಂದನವೇಕಿಲ್ಲ ಮೆಡಿಕಲ್ ಮಾಫಿಯಾದೊಂದಿಗೆ ಕೈ ಜೋಡಿಸಿದ ಪೊಲೀಸರು, ರಾಜಕಾರಣಿಗಳಿಗೆ ಘೇರಾವು ಹಾಕೋಣ ಎಂಬಿತ್ಯಾದಿ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ವಿಮ್ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಝಹನ, ಜಿಲ್ಲಾ ಸಮಿತಿ ಸದಸ್ಯೆ ಕಾರ್ಪರೇಟರ್ ಸಂಶಾದ್ ಅಬೂಬಕ್ಕರ್, ಉಳ್ಳಾಲ ನಗರ ಸಭಾ ಸದಸ್ಯೆ ಶಹನಾಝ್ ಅಕ್ರಮ್ ಹಸನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಝರೀನಾ ರವೂಫ್ ಉಳ್ಳಾಲ, ಜಿಲ್ಲಾ ಉಪಾಧ್ಯಕ್ಷೆ ಮಾರಿಯಮ್ಮ ಬೆಳ್ತಂಗಡಿ, ಪುತ್ತೂರು ನಗರ ಸಭಾ ಸದಸ್ಯೆ ಝೋಹರ, ನ್ಯಾಷನಲ್ ವುಮೆನ್ಸ್ ಫ್ರಂಟ್ ಉಡುಪಿ ಝೋನ್ ಅಧ್ಯಕ್ಷೆ ನಸೀಮ್ ಝುರೈ, ರಾಜ್ಯಾಧ್ಯಕ್ಷೆ ಝೀನತ್ ಫಿರೋಝ್ ಹಾಗೂ ಪಂಚಾಯತ್ ಸದಸ್ಯರು ನಗರ ಸಭಾ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.



Join Whatsapp