ಬೆಂಗಳೂರು: ಅಯೋದ್ಯೆ ರಾಮಮಂದಿರ ಉದ್ಘಾಟನೆ ಇಂದು(22.1.2024) ನಡೆಯುತ್ತಿದ್ದು, ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಪಡೆ ಕಣ್ಣಿಟ್ಟಿದೆ. ಯಾವುದೇ ರ್ಯಾಲಿಗಳಿಗೆ ಅವಕಾಶ ಇಲ್ಲ.
ರಾಮಮಂದಿರ ಉದ್ಘಾಟನೆ ಹಿನ್ನಲೆ ಮಂಗಳೂರು ನಗರದಾದ್ಯಂತವೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಧ್ಯರಾತ್ರಿಯಿಂದ 23ರ ಮುಂಜಾನೆವರೆಗೆ ಮದ್ಯ ಮಾರಾಟ ಬಂದ್ಗೆ ಪ್ರಸ್ತಾವನೆ ಹೊರಡಿಸಲಾಗಿದೆ. ಫ್ಲೆಕ್ಸ್, ಬಂಟಿಂಗ್ಸ್ ಗಳ ಮೇಲೆ ನಿಗಾ ಇಡಲು ಪಾಲಿಕೆಗೆ ಸೂಚನೆ ನೀಡಿದೆ. 196 ಕಡೆ ಧಾರ್ಮಿಕ ಕಾರ್ಯಕ್ರಮ ಸ್ಥಳ ಗುರುತು ಮಾಡಿ ನಿಗಾ ಇಡಲಾಗಿದೆ.
131 ಸೂಕ್ಷ್ಮ ಪ್ರದೇಶ ಗುರುತಿಸಲಾಗಿದೆ. 57 ಸೆಕ್ಟರ್ ಮೊಬೈಲ್ ಸ್ವ್ಕಾಡ್ ಹಗಲು ರಾತ್ರಿ ಗಸ್ತು ಕಾರ್ಯ ನಿರ್ವಹಿಸಲಿದೆ. 14 ಚೆಕ್ ಪಾಯಿಂಟ್ ನಿಯೋಜನೆ ಮಾಡಲಾಗಿದೆ. 9 ಸಿಎಆರ್, 3 ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಮಂಗಳೂರಿನ ಎಲ್ಲಾ ಕಡೆ ವಿದ್ವಂಸಕ ತಪಾಸಣಾ ತಂಡದಿಂದ ತಪಾಸಣೆ ನಡೆಸಲಾಗುತ್ತೆ. ಮೆರವಣಿಗೆ, ರ್ಯಾಲಿಗಳಿಗೆ ಅವಕಾಶ ಇಲ್ಲ. 3 ಡಿಸಿಪಿ, 6 ಎಸಿಪಿ, 11 ಪಿಐ, 37 ಪಿಎಸ್‌ಐ ಹಾಗೂ 781 ಪೊಲೀಸ್ ನಿಯೋಜನೆ ಮಾಡಲಾಗಿದೆ.