Home ಟಾಪ್ ಸುದ್ದಿಗಳು ಕೊಡಗು : ‘ರಾಜ್ಯ ಶ್ರೇಷ್ಠ ವೈದ್ಯೆ ಪ್ರಶಸ್ತಿ’ ಪುರಸ್ಕೃತ ಡಾ. ಮುಕ್ಕಾಟೀರ ಗ್ರೀಷ್ಮ ಬೋಜಮ್ಮರಿಗೆ WIM...

ಕೊಡಗು : ‘ರಾಜ್ಯ ಶ್ರೇಷ್ಠ ವೈದ್ಯೆ ಪ್ರಶಸ್ತಿ’ ಪುರಸ್ಕೃತ ಡಾ. ಮುಕ್ಕಾಟೀರ ಗ್ರೀಷ್ಮ ಬೋಜಮ್ಮರಿಗೆ WIM ವತಿಯಿಂದ ಸನ್ಮಾನ

ಕೊಡಗು:  ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಸುದೀರ್ಘ ಅವಧಿಯಿಂದ ಬಡವರ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಡಾ| ಮುಕ್ಕಾಟೀರ ಗ್ರೀಷ್ಮ ಬೋಜಮ್ಮರವರು ‘ರಾಜ್ಯ ಶ್ರೇಷ್ಠ ವೈದ್ಯೆ ಪ್ರಶಸ್ತಿ’ಗೆ ಬಾಜನರಾಗಿರುತ್ತಾರೆ. ಅವರ ಸೇವೆಯನ್ನು ಗುರುತಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಗೌರವಾನ್ವಿತರನ್ನು ಸನ್ಮಾನಿಸಲಾಯಿತು.

 ಈ ಸಂದರ್ಭದಲ್ಲಿ WIM ರಾಜ್ಯ ಕಾರ್ಯದರ್ಶಿ ತನುಜಾವತಿ , WIM ರಾಜ್ಯ ಸಮಿತಿ ಸದಸ್ಯೆ ಮೇರಿ ವೇಗಸ್, ಜಿಲ್ಲಾ ಸಮಿತಿ ಸದಸ್ಯರುಗಳಾದ ನಾಗರತ್ನ, ಸಲೀಕತ್, ಶಂಸುನ್ನೀಸ ಹಾಗೂ ರಿಷಾನ ರವರು ಉಪಸ್ಥಿತರಿದ್ದರು.

ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಸರಕಾರದ ಮೂಲಕ ರಾಜ್ಯದ ಹಲವು ವೈದ್ಯರಿಗೆ ಶ್ರೇಷ್ಠ ವೈದ್ಯ ಪ್ರಶಸ್ತಿಯನ್ನು ನೀಡಲಾಗಿದ್ದು, ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆಯಾಗಿರುವ ಮುಕ್ಕಾಟಿರ ಡಾ.ಗ್ರೀಷ್ಮ ಬೋಜಮ್ಮ ಅವರಿಗೂ ಈ ಪ್ರಶಸ್ತಿ ಲಭ್ಯವಾಗಿದೆ.
ಉತ್ತಮ ಪ್ರಸೂತಿ ತಜ್ಞೆ ಎಂದು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್ ಪ್ರಶಸ್ತಿ ಪ್ರದಾನ ಮಾಡಿದ್ದರು.


ಡಾ.ಗ್ರೀಷ್ಮಾ ಬೋಜಮ್ಮ ಅವರು ಕಳೆದ 2007ರಿಂದ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಶ್ರೀಮಂಗಲ ಪ.ಪೂ ಕಾಲೇಜಿನ ಮಾಜಿ ಪ್ರಾಂಶುಪಲರಾದ ಕಟ್ಟೇರ ಎನ್.ಮೇದಪ್ಪ ಹಾಗೂ ಶಿಕ್ಷಕಿ ದಿವಂಗತ ಉಷಾಬಾಯಿ ಅವರ ಪುತ್ರಿ ಹಾಗೂ ಗೋಣಿಕೊಪ್ಪಲುವಿನಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಮೂಳೆ ತಜ್ಞ ಮುಕ್ಕಾಟೀರ ಡಾ.ಸಂಜಯ್ ಪೊನ್ನಪ್ಪ ಅವರ ಪತ್ನಿಯಾಗಿದ್ದಾರೆ.

Join Whatsapp
Exit mobile version