ಮಹಿಳಾ ಮೀಸಲಾತಿ ಮಸೂದೆಯಲ್ಲಿ ಓಬಿಸಿಗಳಿಗೆ ಮೀಸಲಾತಿ ನೀಡಿ: WIM ಒತ್ತಾಯ

Prasthutha|

ಹೊಸದಿಲ್ಲಿ: ಮಹಿಳಾ ಮೀಸಲಾತಿ ಮಸೂದೆಯಲ್ಲಿ ಓಬಿಸಿಗಳಿಗೆ ಮೀಸಲಾತಿ ನೀಡಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್(WIM) ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮೀನ್ ಇಸ್ಲಾಂ ಒತ್ತಾಯಿಸಿದ್ದಾರೆ.

- Advertisement -

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೇಂದ್ರದ ಮಹಿಳಾ ಮೀಸಲಾತಿ ಮಸೂದೆ ಡಬ್ಲ್ಯೂ ಆರ್ ಬಿ ಅನುಮೋದನೆಗೊಂಡಿರುವ ನಿಟ್ಟಿನಲ್ಲಿ ಓ.ಬಿ.ಸಿ ಗಳಿಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪ್ರಸ್ತುತ  ಶಾಸನದಲ್ಲಿ ಹಿಂದುಳಿದ ವರ್ಗ ಹಾಗೂ ಒಬಿಸಿ ಗಳಿಗೆ ಉಪಮೀಸಲಾತಿ ನೀಡದಿದ್ದಲ್ಲಿ ಓ ಬಿ ಸಿ ಮಹಿಳೆಯರು ಶಾಸನ ಸಭೆಗಳಿಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಇದು ಮೀಸಲಾತಿಯ ಉದ್ದೇಶವನ್ನೇ ವಿಫಲಗೊಳಿಸಲಿದೆ ಎಂದು ಅವರು ಹೇಳಿದರು.

- Advertisement -

ರಾತ್ರಿ ಬೆಳಗಾಗುವುದರೊಳಗಾಗಿ ನೋಟು ನಿಷೇಧಿಸಿದ, ಸುಗ್ರೀವಾಜ್ಞೆ ಮೂಲಕ ಹಲವಾರು ಕಾಯ್ದೆಗಳನ್ನು ಜಾರಿಗೊಳಿಸಿದ ಕೇಂದ್ರ ಸರಕಾರ ಇದೀಗ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದ ಮಾತ್ರ ಮಹಿಳಾ ಮೀಸಲಾತಿ ಕಾಯ್ದೆಯ ಜಾರಿಗೆ  ವಿಳಂಬ ನೀತಿ ಅನುಸರಿಸುತ್ತಿದೆ.ಸರಕಾರದ   ನಡೆಯನ್ನು ತೀವ್ರವಾಗಿ ಖಂಡಿಸಿದ ಅವರು ಕಾಯ್ದೆಯನ್ನು ಬೇಷರತ್,ಶೀಘ್ರ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಮಹಿಳಾ ಮೀಸಲಾತಿಗೆ ಅನುಸಾರ  ಶಾಸನ ಸಭೆಗಳಲ್ಲಿ ಮಹಿಳೆಯರಿಗೆ 33 ಶೇಕಡಾ ಸೀಟ್ಗಳನ್ನು ನೀಡಲಾಗಿದೆ. ವಿಮೆನ್ ಇಂಡಿಯ ಮೂವ್ಮೆಂಟ್ ಇದನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ .ಏಕೆಂದರೆ  ನೀತಿನಿರೂಪಣಾ ಸಮಿತಿಯಲ್ಲಿ ಮಹಿಳೆಯರ ಪಾತ್ರವೂ ಅತ್ಯವಶ್ಯಕವಾಗಿರುವುದರಿಂದ ವಿಮೆನ್ ಇಂಡಿಯ ಮೂವ್ಮೆಂಟ್ ನ ಉದ್ದೇಶವು ಅದೇ ಆಗಿರುತ್ತದೆ. ಇನ್ನು ಎಸ್ ಸಿ ,ಎಸ್ ಟಿ ಗಳಿಗೆ ಉಪ ಮೀಸಲಾತಿ ನೀಡಿ ಶೇಕಡಾ 33   ಮೀಸಲಾತಿ ನೀಡುವ ಯೋಜನೆ ನ್ಯಾಯ ಬದ್ಧವಾಗಿದೆ ಹಾಗೂ ಕೆಳ ವರ್ಗದವರಿಗೆ ಸಮಾನತೆಯ ಒಂದು ಸ್ಥಾನವನ್ನು ನೀಡುವ ಉದ್ದೇಶ ಕಂಡುಬರುತ್ತದೆ. ಏಕೆಂದರೆ ಭಾರತ ಸ್ವತಂತ್ರ ಪಡೆದು ಇಂದಿನವರೆಗೂ ಈ ವರ್ಗದಲ್ಲಿ ಗಳಿಗೆ ಸಮಾನತೆ ಒದಗಿಸುವಲ್ಲಿ ನಮ್ಮ ಶಾಸನ ವಿಫಲವಾಗಿದೆ . ಬೇಸರದ ಸಂಗತಿ ಏನೆಂದರೆ, ಒಬಿಸಿಗಳನ್ನು ಉಪಮಿಸಲಾತಿಯಿಂದ ಕೈ ಬಿಡಲಾಗಿದೆ . ಇದು ಅಸಮಾನತೆಗೆ ಕಾರಣವಾಗಿದೆ ಹಾಗೂ ಇಂತಹ ನಿರ್ಧಾರದ ಹಿಂದಿನ ಉದ್ದೇಶವೇನಿರಬಹುದು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಆದ್ದರಿಂದ ಇಂತಹ ಒಂದು ಅಸಮಾನತೆಯನ್ನು ತಡೆಯಲು ವಿಮೆನ್ ಇಂಡಿಯ  ಮೂವ್ಮೆಂಟ್ ಓಬಿಸಿ ಗಳಿಗೆ ಮಹಿಳಾ ಮೀಸಲಾತಿ ಮಸೂದೆಯ ಶೇಕಡ 33 ಮೀಸಲಾತಿಯಲ್ಲಿ ಉಪಮಿಸಲಾತಿ ನೀಡಬೇಕೆಂದು ಆಗ್ರಹಿಸುತ್ತದೆ. ನಾವು ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಆಹೋರಾತ್ರಿ ಶ್ರಮಿಸುವ ಒಂದು ಸಂಘಟನೆಯಾಗಿದ್ದು ಮಹಿಳೆಯರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುವ ಉದ್ದೇಶ ನಮ್ಮದು. ಆದ್ದರಿಂದ ಕಡ್ಡಾಯವಾಗಿ ಬೇರೆ ಬೇರೆ ಹಿನ್ನೆಲೆಯಿಂದ ಬರುವ ಮಹಿಳೆಯರಲ್ಲಿ ಓಬಿಸಿ ವರ್ಗದವರನ್ನು ಸೇರಿಸಿದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಹಾಗೂ ಇದರಿಂದ ಮಾತ್ರ ಒಂದು ದೇಶದ ಸಂಸ್ಕೃತಿ ಬೆಳೆಯಲು ಸಾಧ್ಯ.ವಿಮೆನ್ ಇಂಡಿಯ ಮೂವ್ಮೆಂಟ್ ಈ ಸರ್ಕಾರಕ್ಕೆ ನೀಡುವ   ಕರೆ ಏನೆಂದರೆ ಉಪ ಮೀಸಲಾತಿ ಮಸೂದೆಯಲ್ಲಿ ಸಮಾನ ಹುದ್ದೆಗಳನ್ನು ನೀಡಿರಿ.ಇದರಿಂದ ಲಿಂಗತಾರತಮ್ಯ ನೀಗಿ  ದೇಶದ ಸಂವಿಧಾನದ ಬೆಳವಣಿಗೆಯೂ ಆಗಲಿದೆ ಎಂದು ಯಾಸ್ಮೀನ್ ಇಸ್ಲಾಂ ತಿಳಿಸಿದ್ದಾರೆ.