Home ಟಾಪ್ ಸುದ್ದಿಗಳು ‘ನಮ್ಮ ಸ್ವಾತಂತ್ರ್ಯವನ್ನು ಉಳಿಸೋಣ, ನಮ್ಮ ನಾಳೆಯನ್ನು ಸುರಕ್ಷಿತಗೊಳಿಸೋಣ’: WIMನಿಂದ ರಾಜ್ಯಾದ್ಯಂತ ಸ್ವಾತಂತ್ರ್ಯ ದಿನಾಚರಣೆ

‘ನಮ್ಮ ಸ್ವಾತಂತ್ರ್ಯವನ್ನು ಉಳಿಸೋಣ, ನಮ್ಮ ನಾಳೆಯನ್ನು ಸುರಕ್ಷಿತಗೊಳಿಸೋಣ’: WIMನಿಂದ ರಾಜ್ಯಾದ್ಯಂತ ಸ್ವಾತಂತ್ರ್ಯ ದಿನಾಚರಣೆ

ಬೆಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

ರಾಜ್ಯಾದ್ಯಂತ  ಧ್ವಜಾರೋಹಣ ಕಾರ್ಯಕ್ರಮಗಳನ್ನು ನೆರವೇರಿಸುವುದರೊಂದಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಭಾ ಕಾರ್ಯಕ್ರಮ, ಸನ್ಮಾನ,ಆಟೋಟ ಸ್ಪರ್ಧೆ, ಕ್ವಿಜ್ , ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಇತರ ಕಾರ್ಯಕ್ರಮಗಳನ್ನು ನಡೆಸಲಾಯಿತು.

ರಾಜ್ಯ ಮತ್ತು ಜಿಲ್ಲಾ ನಾಯಕರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇಶದಲ್ಲಿ ಪ್ರಸಕ್ತ ನಮ್ಮ ಪೂರ್ವಿಕರು ಕೊಟ್ಟಂತಹ ಸ್ವಾತಂತ್ರವನ್ನು ಉಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಏಕೆಂದರೆ ಮಕ್ಕಳ ಶಾಲಾ ಪುಸ್ತಕಗಳಲ್ಲಿ ಸ್ವತಂತ್ರ ಹೋರಾಟಗಾರರ ಕನಸಿನ ಭಾರತವನ್ನು ಭಗ್ನಗೊಳಿಸುವ ಕಾರ್ಯಯೋಜನೆ ನಡೆಯುತ್ತಿದೆ. ಆದ್ದರಿಂದ ಮುಂದಿನ ಭವಿಷ್ಯದಲ್ಲಿ ಮಕ್ಕಳಿಗೆ ಸ್ವಾತಂತ್ರ್ಯದ ನಿಜವಾದ ಹೋರಾಟಗಾರರ ಬಗ್ಗೆ ಮತ್ತು ಅವರು ಮಾಡಿದ ತ್ಯಾಗದ ಬಗ್ಗೆ ತಿಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಸ್ವಾತಂತ್ರ್ಯ ಸಿಕ್ಕಿ 78 ವರ್ಷದಲ್ಲಿ ಕಲುಷಿತಗೊಂಡ ಈ ದೇಶದ ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವ ಜವಾಬ್ದಾರಿಯು ನಮ್ಮ ಹಾಗೂ ಮುಂದಿನ ಪೀಳಿಗೆಯ ಮೇಲೆ ಇದೆ ಎಂಬ ಸಂದೇಶ ನೀಡಲಾಯಿತು.

Join Whatsapp
Exit mobile version