Home ಟಾಪ್ ಸುದ್ದಿಗಳು ಬೆಂಗಳೂರು ರಸ್ತೆಗಳ ಮೇಲೆ ದೋಣಿ ಸಾರಿಗೆ ಮಾಡುತ್ತೀರಾ?: ಕುಮಾರಸ್ವಾಮಿ ಲೇವಡಿ

ಬೆಂಗಳೂರು ರಸ್ತೆಗಳ ಮೇಲೆ ದೋಣಿ ಸಾರಿಗೆ ಮಾಡುತ್ತೀರಾ?: ಕುಮಾರಸ್ವಾಮಿ ಲೇವಡಿ

ಬೆಂಗಳೂರು: ಮಳೆ ನೀರನ್ನು ಆಕಾಶಕ್ಕೆ ವಾಪಸ್ ಕಳಿಸುತ್ತೀರಾ? ಅಥವಾ ಬೆಂಗಳೂರು ರಸ್ತೆಗಳ ಮೇಲೆ ದೋಣಿ ಸಾರಿಗೆ ಮಾಡುತ್ತೀರಾ? ಉತ್ತರ ಕೊಡಿ ಸಿದ್ದರಾಮಯ್ಯನವರೇ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.


ಈ ಸಂಬಂಧ ಜೆಡಿಎಸ್ ಮಾಡಿದ್ದ ಟ್ವೀಟ್ ಅನ್ನು ಕುಮಾರಸ್ವಾಮಿ ರಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರು ನಗರವನ್ನು ಬ್ರ್ಯಾಂಡ್ ಬೆಂಗಳೂರು ಮಾಡುವೆ ಎಂದಿದ್ದ ಗಿರಾಕಿ ಎಂದು ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೆ ನಮ್ಮ ಹೆಮ್ಮೆಯ ನಗರವನ್ನು ಇಟಲಿಯ ವೆನಿಸ್ ಮಾಡಿ ಕೃತಾರ್ಥರಾಗಿದ್ದಾರೆ. ಭಾರತದ ಸಿಲಿಕಾನ್ ವ್ಯಾಲಿ, ಉದ್ಯಾನನಗರಿಯಾಗಿದ್ದ ಬೆಂಗಳೂರಿನ ಕೆರೆಗಳನ್ನು ಒಂದಾದ ಮೇಲೆ ಒಂದರಂತೆ ನುಂಗಿದ ಪರಿಣಾಮ ಬೆಂಗಳೂರಿಗೆ ಬೆಂಗಳೂರೇ ಕೆರೆಯಾಗಿಬಿಟ್ಟಿದೆ!!”


ಕೆರೆಗಳ್ಳರ ಕೈಗೆ ಅಧಿಕಾರ ಸಿಕ್ಕಿದರೆ ಇನ್ನೇನಾದೀತು?” ಎಂದು ಅಣಕಿಸಿದ್ದಾರೆ. ಮಳೆ ನೀರನ್ನು ಆಕಾಶಕ್ಕೆ ವಾಪಸ್ ಕಳಿಸುತ್ತೀರಾ? ಅಥವಾ ಬೆಂಗಳೂರು ರಸ್ತೆಗಳ ಮೇಲೆ ದೋಣಿ ಸಾರಿಗೆ ಮಾಡುತ್ತೀರಾ? Answer ಮಾಡಿ ಸಿದ್ದರಾಮಯ್ಯನವರೇ ಎಂದು ಹೇಳಿದೆ.

ದುಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮುಳುಗಿದ್ದು ಕೆರೆಯಾಗಿ ಮಾರ್ಪಟ್ಟಿದೆ. ರಾಜಧಾನಿಯ ರಸ್ತೆಗಳೆಲ್ಲ ನೀರು ತುಂಬಿಕೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಹಲವು ಬಡಾವಣೆಗಳು ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿ ಸ್ಥಳೀಯ ನಿವಾಸಿಗಳ ಪರದಾಡುತ್ತಿದ್ದಾರೆ.ಆದರೆ, ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಮತ್ತು ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಾಗೂ ಮಂತ್ರಿಗಳು ಇನ್ನೂ ಕುಂಭಕರ್ಣ ನಿದ್ದೆಯಲ್ಲೇ ಕಾಲ ಹರಣ ಮಾಡ್ತಿದೆ ಎಂದು ಟೀಕಿಸಿದೆ.

Join Whatsapp
Exit mobile version