ವಿಧಾನಸಭೆಯಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ, ನನಗೆ ಬಿಟ್ಟರೆ ಇವತ್ತೇ ತೆರವು ಮಾಡುತ್ತೇನೆ: ಪ್ರಿಯಾಂಕ್ ಖರ್ಗೆ

Prasthutha|

ಬೆಳಗಾವಿ: ಸುವರ್ಣಸೌಧ ವಿಧಾನಸಭೆಯಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ. ನನಗೆ ಬಿಟ್ಟರೆ ಇವತ್ತೇ ತೆರವು ಮಾಡುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

- Advertisement -

ಬೆಳಗಾವಿ ಸುವರ್ಣಸೌಧದಲ್ಲಿ ಇಂದು ಮಾತನಾಡಿದ ಅವರು, ಯಾವ ತತ್ವ ಸಿದ್ದಾಂತದಲ್ಲಿ ಸಮಾನತೆ ಇಲ್ಲವೋ, ಸ್ವಾಭಿಮಾನದ ಬದುಕಿಲ್ಲವೋ ಅದನ್ನು ನಾನು ಒಪ್ಪಲ್ಲ. ಗಾಂಧಿ ಹತ್ಯೆಗೆ ಪ್ರೇರಣೆಯಾದ ತತ್ವವನ್ನು ಒಪ್ಪಲ್ಲ. ಹೀಗಾಗಿ ವಿಧಾನಸಭೆಯಿಂದ ಸಾವರ್ಕರ್ ಫೋಟೋ ತೆಗೆದರೆ ಸೂಕ್ತ. ಆದರೆ ನಿಯಮಾನುಸಾರವೇ ಮಾಡಬೇಕು. ಅದು ನಮ್ಮ ಕೈಯಲ್ಲಿ ಇಲ್ಲ. ಸ್ಪೀಕರ್ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ವಿಧಾನಸಭೆಯಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಫೋಟೋ ಹಾಕಬೇಕು. ಅವರು ಮೂರು ಸಾವಿರ ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ದೇಶವನ್ನು ಆಳಿ ವೈಜ್ಞಾನಿಕ ಮನೋಭಾವ ಬೆಳೆಸಿದ್ದಾರೆ. ಸಾವರ್ಕರ್ ಇತಿಹಾಸ ಅಶ್ವತ್ಥ ನಾರಾಯಣ ಅವರಿಗಿಂತ ಚೆನ್ನಾಗಿ ನನಗೆ ಗೊತ್ತಿದೆ. ಬಿಜೆಪಿಯವರಿಗೆ ಆರ್ ಎಸ್ ಎಸ್ ಇತಿಹಾಸ ಗೊತ್ತಾ?. ಅವರಿಗೆ ಸಾವರ್ಕರ್ ಇತಿಹಾಸ ಗೊತ್ತಾ?. ಅವರಿಂದ ಹೆಚ್ಚು ನನಗೆ ಗೊತ್ತು. ನಾನು ಅವರ ತತ್ವವನ್ನು ನಂಬಲ್ಲ, ಆ ತತ್ವವನ್ನು ಹುಟ್ಟು ಹಾಕಿದವರನ್ನು ಏಕೆ ನಂಬಬೇಕು?. ನನಗೆ ಬಸವ ತತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ಇದೆ ಎಂದರು.

Join Whatsapp
Exit mobile version