ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಕೆಲವೇ ಕ್ಷಣಗಳಲ್ಲಿ ಕೋರ್ಟಿಗೆ ಹಾಜರು?

Prasthutha|

ಬೆಂಗಳೂರು: ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಸಂತ್ರಸ್ತೆ ನ್ಯಾಯಾಧೀಶರ ಮುಂದೆ ನೇರವಾಗಿ ಹಾಜರಾಗಲು ನಿನ್ನೆ ಕೋರ್ಟ್‌ ಅನುಮತಿ ನೀಡಿತ್ತು. ವಕೀಲ ಜಗದೀಶ್ ಗೌಡರ ಪ್ರಕಾರ ಆಕೆ ಬೆಂಗಳೂರಿನಲ್ಲೇ ಇದ್ದು, ಇಂದು ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಯುವತಿಯ ಹೇಳಿಕೆ ತುಂಬಾನೇ ಮುಖ್ಯವಾಗಿದ್ದು, ಸದ್ಯ ನ್ಯಾಯಾಧೀಶರ ಎದುರು ನೇರವಾಗಿ ಹಾಜರಾಗಲು ಕೋರ್ಟ್‌ ಅನುಮತಿ ನೀಡಿದೆ. ಯುವತಿ ನ್ಯಾಯಾಲಯದ ಮುಂದೆ ಇಂದೇ ಹಾಜರಾಗುವ ಸಾಧ್ಯತೆ ಇದೆ. ನೃಪತುಂಗಾ ರಸ್ತೆಯಲ್ಲಿರುವ ಕೋರ್ಟಿನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಯುವತಿಯ ಹೇಳಿಕೆಯನ್ನು ದಾಖಲಿಸಲು ತನಿಖಾ ತಂಡವೂ ಸಿದ್ದಗೊಂಡಿದೆ. ಯುವತಿ ಪರ ವಕೀಲ ಜಗದೀಶ್ ಗೌಡ ಕೂಡ ಕೋರ್ಟ್ ಕಡೆ ಧಾವಿಸಿದ್ದಾರೆ.

- Advertisement -