Home ಟಾಪ್ ಸುದ್ದಿಗಳು ಹಗರಣ ಮಾಡಿಲ್ಲವೆಂದು ಸುಧಾಕರ್ ಆಣೆ ಪ್ರಮಾಣ ಮಾಡ್ತಾರಾ: ಪ್ರದೀಪ್ ಈಶ್ವರ್ ಪ್ರಶ್ನೆ

ಹಗರಣ ಮಾಡಿಲ್ಲವೆಂದು ಸುಧಾಕರ್ ಆಣೆ ಪ್ರಮಾಣ ಮಾಡ್ತಾರಾ: ಪ್ರದೀಪ್ ಈಶ್ವರ್ ಪ್ರಶ್ನೆ

ಬೆಂಗಳೂರು: ಮಾಜಿ ಸಚಿವ ಡಾ.ಕೆ ಸುಧಾಕರ್ ಅವರಿಗೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ನೀಡಲಾಗಿದೆ. ಇದರ ಬೆನ್ನಲ್ಲೇ ರಾಜಕೀಯ ಎದುರಾಳಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರಪ್ಪ ಅವರು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಹಗರಣ ಮಾಡಿಲ್ಲ ಎಂದು ನಾಳೆ ನಂದಿಭೋಗ ನಂದೀಶ್ವರ ದೇಗುಲದಲ್ಲಿ ಆಣೆ ಪ್ರಮಾಣ ಮಾಡುತ್ತೇನೆ. ಸುಧಾಕರ್ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ? ಎಂದು ಸವಾಲು ಹಾಕಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, IT, ED ಬಿಟ್ಟು ಕಾಟ ಕೊಡುತ್ತೀರಾ ಸುಧಾಕರ್ ಅವರೇ, ನಾನು ರೆಡಿ ಇದ್ದೇನೆ. ನಾನು ಹಗರಣ ಮಾಡಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ನಾಳೆ ನಂದಿಭೋಗ ನಂದೀಶ್ವರ ದೇಗುಲದಲ್ಲಿ ಆಣೆ ಮಾಡುತ್ತೇನೆ. ಸುಧಾಕರ್ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ ಎಂದು ಆಣೆ ಪ್ರಮಾಣದ ಸವಾಲೆಸೆದರು.

ಡಾ.ಕೆ.ಸುಧಾಕರ್ ನೂರಾರು ಕೋಟಿ ಆಸ್ತಿ ಮಾಡಿದ್ದಾರೆ. ತಂದೆ ಬಾಮೈದನ ಹೆಸರಲ್ಲಿ ನೂರಾರು ಎಕರೆ ರಿಜಿಸ್ಟರ್ ಆಗಿದೆ. ಸುಧಾಕರ್ ನೂರಾರು ಕೋಟಿ ರೂಪಾಯಿ ಮಾಡಿದ್ದಾರೆ. ಅನೇಕ ಕಂಪನಿಗಳಿಗೆ ಸುಧಾಕರ್ ಹೂಡಿಕೆ ಮಾಡಿದ್ದಾರೆ. ಶ್ರೀಲಂಕಾದಲ್ಲಿ ಸುಧಾಕರ್ ಅವರ ಪ್ರಾಪರ್ಟಿ ಇದೆ. ಬೆಂಗಳೂರಿನ ಸದಾಶಿವನಗರದಲ್ಲಿ ಅವರ ಮನೆ ಇದೆ. ಇದೆಲ್ಲವೂ ಎಲ್ಲಿಂದ ಬಂದಿದೆ ಎಂದು ಅವರು ಹೇಳಲಿ ಎಂದು ವಾಗ್ದಾಳಿ ನಡೆಸಿದರು.

Join Whatsapp
Exit mobile version