Home ಟಾಪ್ ಸುದ್ದಿಗಳು ಕ್ರಿಕೆಟ್ ತಂಡದ ಆಟಗಾರರ ಆಯ್ಕೆಯು ಧರ್ಮದ ಆಧಾರದಲ್ಲಿ ನಡೆಯಲಿದೆಯೇ: ಪ್ರಧಾನಿ ಮೋದಿ ಪ್ರಶ್ನೆ

ಕ್ರಿಕೆಟ್ ತಂಡದ ಆಟಗಾರರ ಆಯ್ಕೆಯು ಧರ್ಮದ ಆಧಾರದಲ್ಲಿ ನಡೆಯಲಿದೆಯೇ: ಪ್ರಧಾನಿ ಮೋದಿ ಪ್ರಶ್ನೆ

‘ರಾಮಮಂದಿರಕ್ಕೆ ಕಾಂಗ್ರೆಸ್ ʼಬಾಬ್ರಿ ಬೀಗʼ ಹಾಕದಿರಲು 400 ಸ್ಥಾನ ಬೇಕಿದೆ’

ಮಧ್ಯಪ್ರದೇಶ: ಕ್ರೀಡೆಯಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುವ ಕುರಿತು ಕಾಂಗ್ರೆಸ್ ಮಾತನಾಡಿದೆ. ಕ್ರಿಕೆಟ್ ತಂಡದ ಆಟಗಾರರ ಆಯ್ಕೆಯು ಧರ್ಮದ ಆಧಾರದಲ್ಲಿ ನಡೆಯಲಿದೆಯೇ ಎಂದು ಪ್ರಧಾನಿ ಮೋದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶದ ಧಾರ್ ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಲಾಗುವುದು ಎಂದು ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಅದರರ್ಥ ವಿರೋಧ ಪಕ್ಷಗಳು ಗುತ್ತಿಗೆಗಳನ್ನು ಧರ್ಮದ ಆಧಾರದಲ್ಲಿ ನೀಡಲಿವೆ ಎಂದೂ ಅವರು ದೂರಿದ್ದಾರೆ.

ಕಾಂಗ್ರೆಸ್ ಪಕ್ಷವು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರಳಿ ತರದಿರಲು, ಅಯೋಧ್ಯೆಯಲ್ಲಿನ ರಾಮಮಂದಿರಕ್ಕೆ ಬಾಬ್ರಿ ಬೀಗ ಹಾಕದಿರಲು ನನಗೆ ಬಿಜೆಪಿ ನೇತೃತ್ವದ ಎನ್ಡಿಎಎ ಮೈತ್ರಿಕೂಟಕ್ಕೆ 400 ಸ್ಥಾನಗಳು ಬೇಕಿದೆ ಎಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Join Whatsapp
Exit mobile version