Home ಟಾಪ್ ಸುದ್ದಿಗಳು ಮಣಿಪುರದ ಬಗ್ಗೆ ಪೂರ್ಣ ಬಲದೊಂದಿಗೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇವೆ: ರಾಹುಲ್ ಗಾಂಧಿ

ಮಣಿಪುರದ ಬಗ್ಗೆ ಪೂರ್ಣ ಬಲದೊಂದಿಗೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇವೆ: ರಾಹುಲ್ ಗಾಂಧಿ

ನವದೆಹಲಿ: ಸಂಘರ್ಷ ಪೀಡಿತ ಮಣಿಪುರ ವಿಚಾರವನ್ನು ಸಂಸತ್ತಿನಲ್ಲಿ ’ಇಂಡಿಯಾ’ ಮೈತ್ರಿಕೂಟ ಧ್ವನಿ ಎತ್ತಲಿದೆ. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಏರಿ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಶಾಂತಿ ನೆಲೆಸಲು ಸಂಪೂರ್ಣವಾಗಿ ಪ್ರಯತ್ನಿಸಲಾಗುವುದು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಮಣಿಪುರಕ್ಕೆ ಭೇಟಿ ನೀಡಿ, ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಬೇಕೆಂದು ಎಂದು ಪುನರುಚ್ಚರಿಸಿದರು. ‘ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾದಾಗಿಂದಲೂ ನಾನು ಮೂರು ಬಾರಿ ಭೇಟಿ ನೀಡಿದ್ದಾನೆ. ಆದರೆ ಇಲ್ಲಿನ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಇಂದಿಗೂ ರಾಜ್ಯವು ಎರಡು ಭಾಗವಾದಂತೆ ಕಂಡು ಬಂದಿದೆ. ಇಲ್ಲಿನ ಮನೆಗಳು ಸುಟ್ಟು ಹೋಗಿವೆ. ಅಮಾಯಕ ಜೀವಗಳು ಅಪಾಯದಲ್ಲಿದೆ. ಸಾವಿರಾರೂ ಕುಟುಂಬಗಳು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ‘ ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version