ಬಿಜ್ನೋರ್: ಆಜಾದ್ ಸಮಾಜ್ ಪಕ್ಷದ (ಕಾನ್ಷಿರಾಮ್) ಅಧ್ಯಕ್ಷ ಚಂದ್ರಶೇಖರ್ ಆಜಾದ್‌ಗೆ ವಾಟ್ಸ್ ಆ್ಯಪ್ ಮೂಲಕ ಕೊಲೆ ಬೆದರಿಕೆ ಬಂದಿದ್ದು, ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -
ಚಂದ್ರಶೇಖರ್ ಅವರನ್ನು 10 ದಿನಗಳಲ್ಲಿ ಕೊಲೆ ಮಾಡುವುದಾಗಿ ಪಕ್ಷದ ಸಹಾಯವಾಣಿ ವಾಟ್ಸ್ ಆ್ಯಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿರುವುದಾಗಿ ಕಾರ್ಯಕರ್ತ ಶೇಕ್ ಪರ್ವೇಜ್ ದೂರು ದಾಖಲಿಸಿದ್ದಾರೆ ಎಂದು ನಗಿನಾ ಠಾಣಾಧಿಕಾರಿ ತೇಜ್ ಪಾಲ್ ಸಿಂಗ್ ತಿಳಿಸಿದ್ದಾರೆ.
ಆಜಾದ್ ಅವರು ಉತ್ತರ ಪ್ರದೇಶದ ನಗಿನಾ ಲೋಕಸಭಾ ಕ್ಷೇತ್ರದ ಸಂಸದ. ದೂರಿನನ್ವಯ ಅಪರಿಚಿತ ವ್ಯಕ್ತಿ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾಂಭಿಸಲಾಗಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.