Home ಕರಾವಳಿ ಪ್ಲಸ್ ವನ್ ಸೀಟುಗಳ ಕೊರತೆ | ಪರಿಹಾರ ಕಂಡುಕೊಳ್ಳುವಲ್ಲಿ ನಿರ್ಲಕ್ಷ್ಯ ಮುಂದುವರಿಸಿದರೆ ತೀವ್ರ ಹೋರಾಟ :...

ಪ್ಲಸ್ ವನ್ ಸೀಟುಗಳ ಕೊರತೆ | ಪರಿಹಾರ ಕಂಡುಕೊಳ್ಳುವಲ್ಲಿ ನಿರ್ಲಕ್ಷ್ಯ ಮುಂದುವರಿಸಿದರೆ ತೀವ್ರ ಹೋರಾಟ : ಎಸ್ ಡಿಪಿಐ

ಮಂಜೇಶ್ವರ : ಕ್ಷೇತ್ರದ ಸುಮಾರು 2154 ವಿದ್ಯಾರ್ಥಿಗಳಿಗೆ ಪ್ಲಸ್ ವನ್ ಸೀಟಿನ ಅಭಾವದ ಕಾರಣದಿಂದಾಗಿ ಮುಂದಿನ ವಿದ್ಯಾಭ್ಯಾಸವನ್ನೇ ಮೊಟಕುಗಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವರ್ಷ ಕಳೆದಂತೆ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಪ್ಲಸ್ ವನ್ ಸೀಟಿನ ಕೊರತೆಗೆ ಇಲ್ಲಿ ಆಡಳಿತದಲ್ಲಿರುವ ಎಡರಂಗ,ವಿರೋಧ ಪಕ್ಷದಲ್ಲಿರುವ ಐಕ್ಯರಂಗ, ಸಂಸದರು ಹಾಗೂ ಶಾಸಕರ  ಅಲಕ್ಷ್ಯತೆಯೇ ಮೂಲ ಕಾರಣವೆಂದು ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದರು.

ಸರಕಾರಗಳು ಮಂಜೇಶ್ವರ ಕ್ಷೇತ್ರವನ್ನು ನಿರ್ಲಕ್ಷಿಸುವುದನ್ನು ನಿಲ್ಲಿಸಬೇಕೆಂದೂ ಪ್ಲಸ್ ವನ್ ಸೀಟುಗಳ ಕೊರತೆ ನೀಗಿಸಲು ಹೈಸ್ಕೂಲುಗಳನ್ನು ಹೈಯ್ಯರ್ ಸೆಕೆಂಡರಿಗಳಾಗಿ ಉನ್ನತ ದರ್ಜೆಗೆ ಬದಲಾಯಿಸಬೇಕೆಂದೂ ಈಗಿರುವ ಸಮಸ್ಯೆಗೆ ತಕ್ಷಣ ಪರಿಹಾರವಾಗಿ ಸೀಟುಗಳನ್ನು ಹೆಚ್ಚಿಸಿ ತಾತ್ಕಾಲಿಕವಾಗಿ ಬ್ಯಾಚುಗಳನ್ನು ನೀಡಿ ಅಲ್ಲದೆ ಶಾಶ್ವತ ಬ್ಯಾಚುಗಳನ್ನು ನೀಡಿ ಸೀಟುಗಳ ಕೊರತೆಗೆ ಶಾಸ್ವತ ಪರಿಹಾರ ಕಂಡುಕೊಳ್ಳಬೇಕೆಂದು ಇಂದು ಸೇರಿದ ಸಭೆಯಲ್ಲಿ ಅಭಿಪ್ರಾಯ ಪಟ್ಟಿತು. ಪ್ಲಸ್ ವನ್ ವಿದ್ಯಾರ್ಥಿಗಳ ಉನ್ನತ ವಿದ್ಯಭ್ಯಾಸಕ್ಕಿರುವ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳದೇ ಹೋದರೆ ವಿದ್ಯಾರ್ಥಿಗಳು, ಹೆತ್ತವರು , ರಕ್ಷಕರು ಹಾಗೂ ಊರ ನಾಗರಿಕರು ಸೇರಿ ದೊಡ್ಡ ಮಟ್ಟದ ಪ್ರತಿಭಟನೆ ನಡಸಲಿಕ್ಕೆ ಪಕ್ಷ ಸಿದ್ಧತೆ ನಡೆಸಬೇಕಾದೀತೆಂದು ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ತಿಳಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಶರೀಫ್ ಪಾವೂರ್ , ಮಂಡಲ ಉಪಾಧ್ಯಕ್ಷ ರಶೀದ್ ಗಾಂಧಿ ನಗರ, ಕೋಶಾಧಿಕಾರಿ ತಾಜು ಉಪ್ಪಳ , ಜೊತೆ ಕಾರ್ಯದರ್ಶಿಗಳಾದ ರಝಾಕ್ ಗಾಂಧಿನಗರ , ಜಲೀಲ್ ಉಪ್ಪಳ ಹಾಗೂ ಮಂಡಲ ಸದಸ್ಯ ಆರಿಫ್ ಖಾದರ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದರು.

Join Whatsapp
Exit mobile version