Home ಟಾಪ್ ಸುದ್ದಿಗಳು ಕೋವಿಡ್ ಸೋಂಕು ತೀವ್ರಗೊಂಡರೆ ರಾಜ್ಯದಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲು ಸಿದ್ಧ : ಶಿಕ್ಷಣ ಸಚಿವ

ಕೋವಿಡ್ ಸೋಂಕು ತೀವ್ರಗೊಂಡರೆ ರಾಜ್ಯದಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲು ಸಿದ್ಧ : ಶಿಕ್ಷಣ ಸಚಿವ

ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಭೀತಿ ಹೆಚ್ಚಾಗುತ್ತಿದ್ದಂತೆ , ಸೋಂಕು ಉಲ್ಭಣಗೊಂಡರೆ ಶಾಲಾ ಕಾಲೇಜುಗಳನ್ನು ಬಂದ್ ಮಾಡಲು ಸಿದ್ಧರಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋವಿಡ್‌ ಸೋಂಕು ತೀವ್ರ ಹೆಚ್ಚಾದರೆ ಶಾಲೆಗಳನ್ನು ರಾಜ್ಯದಲ್ಲಿ ಬಂದ್ ಮಾಡಲು ಕೂಡ ನಾವು ಸಿದ್ದರಿದ್ದೇವೆ ಎಂದು ತಿಳಿಸಿದರು.

ಕೋವಿಡ್ ಸೋಂಕು ಹೆಚ್ಚಳ ವಾಗಿರುವುದು ಸ್ವಲ್ಪ ಆತಂಕ ತಂದಿದೆ. ಅಲ್ಲದೇ ಸೋಂಕಿನ ಹೆಚ್ಚಳದ ಪ್ರಮಾಣ ವಸತಿ ಶಾಲೆಗಳಲ್ಲಿ , ನವೋದಯ ಶಾಲೆಗಳಲ್ಲಿ ಕಂಡುಬಂದಿದೆ. 1-10 ಸರ್ಕಾರಿ ಸರ್ಕಾರಿ ಶಾಲೆಗಳಲ್ಲಿ ಸೋಂಕು ಪತ್ತೆಯಾಗಿಲ್ಲ. ಇವತ್ತು ಅಧಿಕಾರಿಗಳ ಜತೆ ಚರ್ಚೆ ಮಾಡಿಕೊಂಡು. ಇರುವ ಮಾರ್ಗಸೂಚಿಗಳನ್ನು ಕಠಿಣವಾಗಿ ಪಾಲಿಸುತ್ತೇವೆ ಎಂದರು.

ಸರಕಾರವು ಪ್ರತಿದಿನವು ತಜ್ಞರಿಂದ ವರದಿ ಪಡೆದುಕೊಳ್ಳುತ್ತಿದೆ, ವರದಿ ಪ್ರಕಾರ ತಕ್ಷಣಕ್ಕೆ ಯಾವುದೇ ಆತಂಕ ಬೇಡ ಎಂದು ತಜ್ಞರು ತಿಳಿಸಿದ್ದಾರೆ. ಪೋಷಕರು ಗಾಬರಿಗೊಳ್ಳುವುದು ಬೇಡ, ಪ್ರತಿ ಕ್ಷಣದಲ್ಲೂ ಸರ್ಕಾರ ನಿಗಾ ಇಟ್ಟಿದೆ ಎಂದು ಹೇಳಿದರು.

Join Whatsapp
Exit mobile version