Home ಟಾಪ್ ಸುದ್ದಿಗಳು ಶಾರುಖ್ ಖಾನ್’ನನ್ನು ಜೀವಂತವಾಗಿ ಸುಟ್ಟು ಹಾಕುತ್ತೇನೆ: ವಿವಾದಾತ್ಮಕ ಹೇಳಿಕೆ ನೀಡಿದ ಅಯೋಧ್ಯೆ ಸ್ವಾಮಿ

ಶಾರುಖ್ ಖಾನ್’ನನ್ನು ಜೀವಂತವಾಗಿ ಸುಟ್ಟು ಹಾಕುತ್ತೇನೆ: ವಿವಾದಾತ್ಮಕ ಹೇಳಿಕೆ ನೀಡಿದ ಅಯೋಧ್ಯೆ ಸ್ವಾಮಿ

ನವದೆಹಲಿ: ʼಪಠಾಣ್ʼ ಸಿನಿಮಾದ ʼಬೇಷರಂ ರಂಗ್ʼ ಹಾಡಿನ ಬಗ್ಗೆ ಸಂಘಪರಿವಾರ ಕಾರ್ಯಕರ್ತರು ವಿವಾದ ಮಾಡುತ್ತಿದ್ದು, ಈ ನಡುವೆ ಅಯೋಧ್ಯೆಯ ಸ್ವಾಮಿ ಮಹಾಂತ ಪರಮಹಂಸ ಆಚಾರ್ಯ ಅವರು ಶಾರುಖ್ ಖಾನ್’ನನ್ನು ಜೀವಂತವಾಗಿ ಸುಟ್ಟು ಹಾಕುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ʼಬೇಷರಂ ರಂಗ್ʼ ಹಾಡಿನಲ್ಲಿ ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ. ಈ ಬಗ್ಗೆ ಸನಾತನ ಧರ್ಮದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಸಿನಿಮಾದ ಪೋಸ್ಟರ್ ಅನ್ನು ಸುಟ್ಟು ಹಾಕಿದ್ದೇವೆ. ಒಂದು ವೇಳೆ ನಾನು ಶಾರುಖ್ ಖಾನ್’ನನ್ನು ಭೇಟಿಯಾದರೆ ಅವನನ್ನು ಜೀವಂತವಾಗಿ ಸುಟ್ಟು ಹಾಕುತ್ತೇನೆ ಎಂದು ಹೇಳಿದ್ದಾರೆ.

Join Whatsapp
Exit mobile version