Home ಟಾಪ್ ಸುದ್ದಿಗಳು 15 ದಿನದೊಳಗೆ ದೋಷ ಮುಕ್ತನಾಗುತ್ತೇನೆ ಎಂದ ಈಶ್ವರಪ್ಪ: ನಿಸ್ಪಕ್ಷ ತನಿಖೆಗೆ ರಾಜ್ಯಪಾಲರ ಮೊರೆಹೋದ ಸಂತೋಷ್ ಪತ್ನಿ

15 ದಿನದೊಳಗೆ ದೋಷ ಮುಕ್ತನಾಗುತ್ತೇನೆ ಎಂದ ಈಶ್ವರಪ್ಪ: ನಿಸ್ಪಕ್ಷ ತನಿಖೆಗೆ ರಾಜ್ಯಪಾಲರ ಮೊರೆಹೋದ ಸಂತೋಷ್ ಪತ್ನಿ

ಬೆಳಗಾವಿ: 40% ಕಮಿಷನ್ ವಿಷಯದಲ್ಲಿ ಆತ್ಮಹತ್ಯೆಗೈದ ಗುತ್ತಿಗೆದಾರ ಸಂತೋಷ್‌ ಪಾಟೀಲ್ ಪ್ರಕರಣದ ಪಾರದರ್ಶಕ ತನಿಖೆಗೆ ಆಗ್ರಹಿಸಿ ಪಾಟೀಲ್ ಕುಟುಂಬಸ್ಥರು ರಾಜ್ಯಪಾಲರ ಮೊರೆ ಹೋಗಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಕೆ.ಎಸ್ ಈಶ್ವರಪ್ಪ ನಿರ್ದೇಶನದಂತೆ ತನಿಖೆ ನಡೆಯುತ್ತಿದೆ. ಕೇವಲ 15 ದಿನದಲ್ಲಿ ಈ ಪ್ರಕರಣದಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದು ಸಂತೋಷ್ ಪತ್ನಿ ರೇಣುಕಾ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಈಶ್ವರಪ್ಪ ಪ್ರಭಾವಿ ಆಗಿದ್ದು, ಪ್ರಕರಣ ತನಿಖೆ ದಿಕ್ಕು ತಪ್ಪಿಸಿರುವ ಅನುಮಾನ ನಮಗಿದೆ. ಪೊಲೀಸ್ ಅಧಿಕಾರಿಗಳು ಈ ಕೇಸ್‍ನ ಪ್ರತಿ ಹಂತದ ತನಿಖೆಯ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ. ಈಶ್ವರಪ್ಪಗೆ ಅನುಕೂಲ ಮಾಡಿ ಕೇಸ್ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಆದ್ದರಿಂದ ತನಿಖೆಯಲ್ಲಿ ಪಕ್ಷಪಾತ ಮಾಡದೆ ಪಾರದರ್ಶಕವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ತನಿಖಾಧಿಕಾರಿಗಳಿಗೆ ಆದೇಶಿಸಲು ರೇಣುಕಾ ಸಂತೋಷ್ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

Join Whatsapp
Exit mobile version