Home ಜಾಲತಾಣದಿಂದ ಕಾಡಾನೆ ದಾಳಿ: ಕುರಿ ಕಾಯುತ್ತಿದ್ದ ಮಹಿಳೆ ಮೃತ್ಯು

ಕಾಡಾನೆ ದಾಳಿ: ಕುರಿ ಕಾಯುತ್ತಿದ್ದ ಮಹಿಳೆ ಮೃತ್ಯು

ಸಾಂದರ್ಭಿಕ ಚಿತ್ರ

ಆನೇಕಲ್: ಕಾಡಾನೆ ದಾಳಿಯಿಂದ ಕುರಿ ಕಾಯುತ್ತಿದ್ದ ಮಹಿಳೆ ಮೃತಪಟ್ಟ ದಾರುಣ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ‌ ಹಕ್ಕಿಪಿಕ್ಕಿ ಕಾಲೋನಿ ಬಳಿ ನಡೆದಿದೆ.

 ಕಾಲಿನಿಂದ ತುಳಿದು ನಾಗಮ್ಮ(48) ಎಂಬ ಮಹಿಳೆಯನ್ನು ಒಂಟಿ ಸಲಗ ಕೊಂದು ಹಾಕಿದೆ. ಪದೇ ಪದೆ ಸುತ್ತಮುತ್ತಲಿನ ಜನರ ಮೇಲೆ ಕಾಡಾನೆ ದಾಳಿ ಮಾಡುತ್ತಿದೆ. ಕಾಡಾನೆ ಸೆರೆ ಹಿಡಿಯುವಂತೆ ಅರಣ್ಯ ಸಿಬ್ಬಂದಿಗೆ ಹಲವು ಸಲ ಮನವಿ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ. ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version