Home ಟಾಪ್ ಸುದ್ದಿಗಳು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ!

ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ!

ಬೆಂಗಳೂರು: ಪ್ರೀತಿಗೆ ಅಡ್ಡಿ ಆಗುತ್ತಿದ್ದಾನೆಂದು ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು, ಕೈ ತೊಳೆದುಕೊಳ್ಳಲು ಮುಂದಾಗಿದ್ದ ಪತ್ನಿಯನ್ನು ಕೆ.ಜಿ. ನಗರ ಪೊಲೀಸರು ಬಂಧಿಸಿದ್ದಾರೆ.

ರಂಜಿತಾ ಬಂಧಿತ ಆರೋಪಿ. ರಂಜಿತಾ ಐದು ವರ್ಷದ ಹಿಂದೆ ಆಟೋ ಚಾಲಕ ಕಾರ್ತಿಕ್ ಎಂಬತಾನನ್ನು ಪ್ರೀತಿಸಿ ಮದುವೆ ಆಗಿದ್ದಳು. ಇಬ್ಬರ ಮದುವೆಗೆ ಸಾಕ್ಷಿ ಎಂಬಂತೆ ನಾಲ್ಕು ವರ್ಷದ ಹೆಣ್ಣು ಮಗುವಿದೆ. ಕೊಲೆಯಾದ ಕಾರ್ತಿಕ್ ಸ್ನೇಹಿತ ಸಂಜೀವ್ ಗೆ ತನ್ನದೇ ಮನೆಯಲ್ಲಿ ಆಸರೆ ನೀಡಿದ್ದ. ಆರೋಪಿ ಸಂಜೀವ್ ಸ್ನೇಹ ಮರೆತು ಗೆಳೆಯನ ಪತ್ನಿ ರಂಜಿತಾ ಜೊತೆಯಲ್ಲಿ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದನು.

ರಂಜಿತಾ ಮತ್ತು ಸಂಜೀವ್ ಪ್ರೀತಿ ಉಲ್ಬಣಿಸಿ ಮದುವೆ ಹಂತಕ್ಕೆ ಹೊಗುತ್ತಿದ್ದಂತೆ ಕಾರ್ತಿಕ್ ತಮಗೆ ಅಡ್ಡಿ ಆಗಬಹುದೆಂದು ತಿಳಿದು ಕೊಲೆಗೆ ಸ್ಕೆಚ್ ಹಾಕುತ್ತಾರೆ. ಜುಲೈ 29 ರಂದು ಕಾರ್ತಿಕ್ ನನ್ನ ಆರೋಪಿ ಸಂಜೀವ್, ಸುಬ್ರಮಣ್ಯ ಇಬ್ಬರು ಸೇರಿ ಚನ್ನಪಟ್ಟಣ ಕಡೆ ಕರೆದುಕೊಂಡು ಹೋಗಿದ್ದಾರೆ. ದಾರಿ ಮಧ್ಯೆ ಪಾರ್ಟಿ ಹೆಸರಲ್ಲಿ ಕಾರ್ತಿಕ್‍ ಗೆ ಕಂಠ ಪೂರ್ತಿ ಮದ್ಯ ಕುಡಿಸಲಾಗಿದೆ. ಬಳಿಕ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ವೃಷಭವತಿ ನದಿಗೆ ಮೂಟೆ ಕಟ್ಟಿ ಎಸೆದು ಬಂದಿರುತ್ತಾರೆ. 

ಕೊಲೆ ಬಳಿಕ ಪತ್ನಿ ರಂಜಿತಾ ನನ್ನ ಪತಿ ಕಾರ್ತಿಕ್ ಮಿಸ್ಸಿಂಗ್ ಆಗಿದ್ದಾರೆಂದು ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ರಂಜಿತಾಳ ಬಗ್ಗೆ ಅನುಮಾನ ಬಂದು ತನಿಖೆಗೆ ಒಳಪಡಿಸಿದ್ದಾರೆ. ಆಗ ಕೊಲೆಯ ರಹಸ್ಯ ಬಯಲಾಗಿದೆ. ಸದ್ಯ ಘಟನೆ ಸಂಬಂಧ ಕೊಲೆಯಾದ ಕಾರ್ತಿಕ್ ಪತ್ನಿ ರಂಜಿತಾ, ಪ್ರಿಯಕರ ಸಂಜೀವ್, ಸುಬ್ರಮಣ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. 

Join Whatsapp
Exit mobile version