Home ಟಾಪ್ ಸುದ್ದಿಗಳು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ

ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ

ದಾವಣಗೆರೆ: ರಿಂಗ್ ರಸ್ತೆಯಲ್ಲಿ ಮಾ.23 ರಂದು ನಡೆದ ಮಹಾಂತೇಶ್ ಎಂಬವರ ಹತ್ಯೆ ಪ್ರಕರಣದ ಹಿಂದಿನ ಕಾರಣ ತನಿಖೆಯಿಂದ ಹೊರಬಿದ್ದಿದೆ.


ಪತ್ನಿ ಸೌಮ್ಯಾ (27) ಸಂಚು ರೂಪಿಸಿ ಪ್ರಿಯಕರ ಚಂದ್ರಶೇಖರ್ (28) ಜೊತೆ ಸೇರಿ ಹತ್ಯೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.


ಆರೋಪಿ ಚಂದ್ರಶೇಖರ್, ರಾತ್ರಿ ವೇಳೆ ಮಹಾಂತೇಶ್ ನನ್ನು ಕರೆದುಕೊಂಡು ಹೋಗಿ ಮದ್ಯದಲ್ಲಿ ನಿದ್ರೆ ಮಾತ್ರೆ ಸೇರಿಸಿ ಕುಡಿಸಿ ಹತ್ಯೆ ಮಾಡಿದ್ದ. ನಂತರ ಶವದ ಮೇಲೆ ಕಾರದಪುಡಿ ಹಾಕಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕುತ್ತಿಗೆ ಕತ್ತರಿಸಿದ್ದ.
ಹತ್ಯೆಯಾದ ಮಹಾಂತೇಶ್ ದಾವಣಗೆರೆಯಲ್ಲಿ ಕಟಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ.


ವಕೀಲರೊಬ್ಬರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯ, ಮೆಡಿಕಲ್ ರೆಪ್ ಆಗಿದ್ದ ಬಾಲ್ಯ ಸ್ನೇಹಿತ ಚಂದ್ರಶೇಖರ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ವಿದ್ಯಾನಗರ ಠಾಣೆ ಪೊಲೀಸರು ಕೊಲೆ ರಹಸ್ಯವನ್ನು ಬಯಲಿಗೆಳೆದಿದ್ದಾರೆ.

Join Whatsapp
Exit mobile version