ಪ್ರೇಮಿಯೊಂದಿಗೆ ಸಿಕ್ಕಿ ಬಿದ್ದ ಪತ್ನಿ: ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ..!

- Advertisement -

ಹರ್ಯಾಣ: ತಾನು ಪ್ರೇಮಿಯೊಂದಿಗಿರುವುದನ್ನು ಪತಿ ನೋಡಿದ್ದಕ್ಕೆ, ಆತನ ಕುತ್ತಿಗೆಗೆ ದುಪಟ್ಟಾ ಬಿಗಿದು ಕೊಲೆ ಮಾಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

- Advertisement -

ಇತ್ತೀಚೆಗೆ ಮೀರತ್ ​ನಲ್ಲಿ ಇಂಥದ್ದೇ ಘಟನೆಯೊಂದು ನಡೆದಿದ್ದು, ಮಹಿಳೆ ಹಾಗೂ ಆಕೆಯ ಪ್ರೇಮಿ ಸೇರಿಕೊಂಡು ಪತಿಯನ್ನು ಕೊಲೆ, ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್ ​ನಲ್ಲಿ ಹಾಕಿ ಸಿಮೆಂಟ್​ನಿಂದ ಸೀಲ್ ಮಾಡಿರುವ ಘಟನೆ ನಡೆದಿತ್ತು.

ತಮ್ಮ ವಿಷಯ ಪತಿಗೆ ಗೊತ್ತಾಯಿತೆಂಬ ಭಯದಲ್ಲಿ ಆತನನ್ನು ಕೊಂದಿದ್ದಾಳೆ. ರವೀನಾ ಯೂಟ್ಯೂಬರ್ ಆಗಿದ್ದು, ಒಂದೂವರೆ ವರ್ಷಗಳ ಹಿಂದೆ ಸುರೇಶ್ ಎಂಬಾತನನ್ನು ಇನ್​ಸ್ಟಾಗ್ರಾಮ್​ನಲ್ಲಿ ಭೇಟಿಯಾಗಿದ್ದಳು. ಪತಿ ಪ್ರವೀಣ್ ಆಕೆ ನಿತ್ಯವೂ ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆಯುವುದರ ಕುರಿತು ಜಗಳವಾಡುತ್ತಿದ್ದರು.

- Advertisement -

ಪ್ರವೀಣ್ ಮನೆಗೆ ಬಂದಾಗ ಆತನಿಗಿದ್ದ ಭಯ ನಿಜವಾಗಿತ್ತು, ಆಕೆ ಸುರೇಶ್​ ಎಂಬುವವನ ಜತೆ ಇದ್ದುದನ್ನು ಕಂಡು ತಾಳ್ಮೆ ಕಳೆದುಕೊಂಡಿದ್ದಾನೆ. ಬಳಿಕ ವಾಗ್ವಾದ ನಡೆದಿತ್ತು. ನಂತರ ಮಹಿಳೆ ದುಪಟ್ಟಾದಿಂದ ಪ್ರವೀಣ್​ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಸಂಜೆಯಾಗುವವರೆಗೆ ಹೆಣವನ್ನು ಅಲ್ಲೇ ಇಟ್ಟುಕೊಂಡು ಬಳಿಕ, 6 ಕಿ.ಮೀ ಬೈಕ್​ನಲ್ಲಿ ಹೋಗಿ ಚರಂಡಿಗೆ ದೇಹ ಎಸೆದಿದ್ದರು.

ಘಟನೆ ಏನು?

32 ವರ್ಷದ ರವೀನಾ ಮತ್ತು ರೀಲ್ಸ್‌ ಸ್ಟಾರ್‌ ಸುರೇಶ್‌ ಸೋಷಿಯಲ್‌ ಮೀಡಿಯಾ ಇನ್‌ ಸ್ಟಾಗ್ರಾಮ್‌ ನಲ್ಲಿ ಪರಿಚಯವಾಗಿದ್ದರು. ಹರಿಯಾಣದ ಪ್ರೇಮ್‌ ನಗರಲ್ಲಿ ಇಬ್ಬರು ಒಟ್ಟಿಗೇ ವಿಡಿಯೋ ಮಾಡಲು ಪ್ರಾರಂಭಿಸಿದ್ದರು. ಇದಕ್ಕೆ ರವೀನಾಳ ಪತಿ ಪ್ರವೀಣ್‌ ಮತ್ತು ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದಾಗ್ಯೂ ಸುಮಾರು ಒಂದೂವರೆ ವರ್ಷಗಳ ಕಾಲ ಇಬ್ಬರು ಕಂಟೆಂಟ್‌ ಕ್ರಿಯೇಟ್‌ ಮಾಡುತ್ತಿದ್ದರು. ಇದರಿಂದ ಫಾಲೋವರ್ಸ್‌ ಗಳ ಸಂಖ್ಯೆ 34,000ಕ್ಕೆ ತಲುಪಿತ್ತು.

ಬಳಿಕ ಇತರ ಕಲಾವಿದರನ್ನೂ ಸೇರಿಸಿಕೊಂಡು ರೀಲ್ಸ್‌ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ರೀಲ್ಸ್‌ ಮಾಡುತ್ತಲೇ ರವೀನಾ ಮತ್ತು ಸುರೇಶ್‌ ಪ್ರೀತಿಸಲು ಶುರು ಮಾಡಿದ್ದರು. ಕಳೆದ ಮಾರ್ಚ್‌ 25ರಂದು ರವೀನಾಳ ಪತಿ ಪ್ರವೀಣ್‌ (35), ಇವರಿಬ್ಬರೂ ಅಕ್ರಮ ಸಂಬಂಧ ಇರುವುದನ್ನು ಪತ್ತೆಹಚ್ಚಿದ್ದ. ಹೀಗಾಗಿ ರವೀನಾ ತನ್ನ ಪ್ರಿಯಕರ ಸುರೇಶ್‌ ಜೊತೆ ಸೇರಿ ದುಪ್ಪಟ್ಟಾದಿಂದ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಪ್ರವೀಣ್‌ ಎಲ್ಲಿದ್ದಾನೆ ಅಂತ ಮನೆಯವರು ಕೇಳಿದಾಗ ತನಗೇನು ಗೊತ್ತೇ ಇಲ್ಲವೆಂಬಂತೆ ರವೀನಾ ನಟಿಸಿದ್ದಾಳೆ. ಅದೇ ದಿನ ರಾತ್ರಿ 2:30ರ ಸುಮಾರಿಗೆ ಪ್ರಿಯಕರನ ಬೈಕ್‌ ನಲ್ಲಿ ಪ್ರವೀಣ್‌ ಶವ ಸಾಗಿಸಿದ್ದಾಳೆ. ಹಿಸಾರ್‌ ನರುವ ತನ್ನ ಮನೆಯಿಂದ 6 ಕಿಮೀ ದೂರದಲ್ಲಿರುವ ದಿನೊಡ್‌ ರಸ್ತೆ ಬಳಿಯ ಚರಂಡಿಗೆ ಶವ ಎಸೆದುಬಂದಿದ್ದಾಳೆ. ಕಳೆದ ಮಾರ್ಚ್‌ 28ರಂದು ಪೊಲೀಸರಿಗೆ ಪ್ರವೀಣ್‌ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಬಳಿಕ ಆಕೆಯ ಮನೆಯ ರಸ್ತೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ರವೀನಾ ಹೆಲ್ಮೆಟ್‌ ಧರಿಸಿ ಬೈಕ್‌ ನಲ್ಲಿ ಬಂದ ವ್ಯಕ್ತಿಯೊಂದಿಗೆ ತನ್ನ ಮುಖಮುಚ್ಚಿಕೊಂಡು ಶವ ಸಾಗಿದ್ದಾಳೆ. 2 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗುವಾಗ ಬೈಕ್‌ ನಲ್ಲಿ ಇಬ್ಬರೇ ಬಂದಿದ್ದಾರೆ. ಈ ವೇಳೆ ಮಧ್ಯದಲ್ಲಿದ್ದ ಮೃತದೇಹ ನಾಪತ್ತೆಯಾಗಿತ್ತು. ಬಳಿಕ ಮಾಹಿತಿ ಖಚಿತಪಡಿಸಿಕೊಂಡ ಪೊಲೀಸರು ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ. ರವೀನಾ ಮತ್ತು ಪ್ರವೀಣ್‌ಗೆ 6 ವರ್ಷದ ಮಗ ಇದ್ದು, ತನ್ನ ಅಜ್ಜನೊಂದಿಗೆ ವಾಸಿಸುತ್ತಿದ್ದಾನೆ.

- Advertisement -


Must Read

Related Articles