Home ಟಾಪ್ ಸುದ್ದಿಗಳು ವ್ಯಾಪಕ ಮಳೆ ಹಿನ್ನೆಲೆ; ರಸ್ತೆಗೆ ಉರುಳಿದ ಬೃಹತ್ ಬಂಡೆ

ವ್ಯಾಪಕ ಮಳೆ ಹಿನ್ನೆಲೆ; ರಸ್ತೆಗೆ ಉರುಳಿದ ಬೃಹತ್ ಬಂಡೆ

ಶಿವಮೊಗ್ಗ: ಸೋಮವಾರ ಸುರಿದ ವ್ಯಾಪಕ ಮಳೆಯಿಂದಾಗಿ ರಸ್ತೆ ಮೇಲೆ ಬೃಹತ್ ಗಾತ್ರದ ಬಂಡೆ ಉರುಳಿ ಬಿದ್ದು ಹಿಲ್ಕುಂಜಿ ಸುಳುಗೋಡು ಸಂಪರ್ಕ ಕಡಿತಗೊಂಡಿದೆ.

ಇದು ಆಗರಬೈಲು, ಸುಳುಗೋಡು, ಹೆಂಡೆಗದ್ದೆ ಗ್ರಾಮದ ಸಂಪರ್ಕ ರಸ್ತೆಯಾಗಿದ್ದು, ಈಗ ಸಂಚಾರಕ್ಕೆ ತೊಡಕುಂಟಾಗಿದೆ.

ಬಂಡೆಕಲ್ಲು ಸಂಪೂರ್ಣ ರಸ್ತೆಯನ್ನು ಆವರಿಸಿದ್ದು, ಬೈಕ್ ಸಂಚಾರ ಕೂಡ ಸಾಧ್ಯವಿಲ್ಲದಂತಾಗಿದೆ. ಪರಿಸರದಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಜನ ಸಂಚಾರಕ್ಕೆ ಪರದಾಡುವ ಪರಿಸ್ಥಿತಿಯುಂಟಾಗಿದೆ.

ಬಂಡೆಯನ್ನು ಕೂಡಲೇ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ನಗರ ಸೊಸೈಟಿ ಉಪಾಧ್ಯಕ್ಷ ಕುಮಾರ್ ಆಗ್ರಹಿಸಿದ್ದಾರೆ.

Join Whatsapp
Exit mobile version