Home ಟಾಪ್ ಸುದ್ದಿಗಳು ಇರಾಕ್,ಪ್ಯಾಲೆಸ್ತೀನ್, ಅಫಘಾನಿಸ್ತಾನ ಮೊದಲೆಡೆ ನಾಗರಿಕರ ಸಾವಿಗೆ ಪಾಶ್ಚಾತ್ಯರ ಮೌನವೇಕೆ: ಚೀನಾಪ್ರಶ್ನೆ

ಇರಾಕ್,ಪ್ಯಾಲೆಸ್ತೀನ್, ಅಫಘಾನಿಸ್ತಾನ ಮೊದಲೆಡೆ ನಾಗರಿಕರ ಸಾವಿಗೆ ಪಾಶ್ಚಾತ್ಯರ ಮೌನವೇಕೆ: ಚೀನಾಪ್ರಶ್ನೆ

ಉಕ್ರೇನಿನಲ್ಲಿನ ನಾಗರಿಕರ ಸಾವಿನ ಬಗೆಗೆ ಆಕಾಶ ಭೂಮಿ ಒಂದು ಮಾಡಿ ಬೊಬ್ಬೆ ಹಾಕುತ್ತಿರುವ ಅಮೆರಿಕ, ನ್ಯಾಟೋ ಪಾಶ್ಚಾತ್ಯ ದೇಶಗಳಿಗೆ ಚೀನಾ ಒಂದು ಪ್ರಶ್ನೆಯನ್ನು ಕೇಳಿದೆ. ಇರಾನ್ ಮತ್ತು ಅಫಘಾನಿಸ್ತಾನದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ನಡೆಸಿದ ನಾಗರಿಕರ ಕೊಲೆಯ ಬಗೆಗೆ ಪಾಶ್ಚಾತ್ಯ ದೇಶಗಳು ಸದಾ ಏಕೆ ಮೌನವನ್ನೇ ವಹಿಸಿ ಕೂತಿವೆ? ಎಂದು ಪ್ರಶ್ನಿಸಿದೆ.

ಎಲ್ಲ ನಾಗರಿಕರ ಸಾವು ಖಂಡನಾರ್ಹ. ಹಾಗೆಯೇ ರಶಿಯಾ ಉಕ್ರೇನ್ ಮೇಲೆ ನಡೆಸಿರುವ ದಾಳಿಯನ್ನು ಕೂಡ ನಾವು ಬೆಂಬಲಿಸುವುದಿಲ್ಲ. ಆದರೆ ಬೈಡನ್ ಮತ್ತು ನ್ಯಾಟೋ ದೇಶಗಳು ಉಕ್ರೇನ್ ನಾಗರಿಕರ ಬಗೆಗೆ ಬೊಬ್ಬಿಟ್ಟಂತೆ ಇತರ ಎಷ್ಟೋ ದೇಶಗಳಲ್ಲಿ ನಡೆದ ನಾಗರಿಕರ ಹತ್ಯೆಯ ಬಗೆಗೆ ಸುಮ್ಮನಿರುವುದು ಅವರ ಇಬ್ಬಗೆ ನೀತಿಯಾಗಿದೆ ಎಂದು ಚೀನಾ ಹೇಳಿದೆ.

ಇರಾನ್, ಸೆರ್ಬಿಯಾ, ಪ್ಯಾಲೆಸ್ತೀನ್ ಮೊದಲಾದೆಡೆ ಇದೇ ದ್ವಿಮುಖ ನೀತಿಯ ಇದೇ ಅಮೆರಿಕ ಸಂಯುಕ್ತ ಸಂಸ್ಥಾನದ ಬೆಂಬಲಿಗರಿಂದ ನಾಗರಿಕರ ಹತ್ಯಗಳು ದಿನನಿತ್ಯ ನಡೆಯುತ್ತಿವೆ. ಸಿರಿಯಾದಲ್ಲಿ ಮತ್ತು ಕೊಲ್ಲಿಯಲ್ಲಿ ಆರದ ಬೆಂಕಿಯನ್ನು ಹಚ್ಚಿರುವರು ಯಾರು? ಇಸ್ರೇಲಿಗೆ ಎಲ್ಲ ರೀತಿಯ ಬೆಂಬಲ ನೀಡಿ ನಿತ್ಯ ಪ್ಯಾಲೆಸ್ತೀನ್ ಹತ್ಯೆಗೆ ಕಾರಣರಾದವರು ಯಾರು ಎಂದು ಚೀನಾದ ಜನರ ಕಮ್ಯೂನಿಸ್ಟ್ ಪಕ್ಷ ತನ್ನ ಹೇಳಿಕೆ ನೀಡಿದೆ. 

ವಿದೇಶಾಂಗ ಸಚಿವ ಝಾವೋ ಲೆಜಿಯನ್ ಈ ಕಟ್ಟುನಿಟ್ಟು ಪ್ರಶ್ನೆಗಳ ಪತ್ರವನ್ನು ಪಾಶ್ಚಾತ್ಯರ ಮುಖಕ್ಕೆ ಹಿಡಿದಿದ್ದಾರೆ. 1999ರಲ್ಲಿ ಸೆರ್ಬಿಯಾ ಮರೆತುಬಿಟ್ಟಿದ್ದೀರಿ. ಚೀನಾ ಶಾಂತಿ ಮಾತುಕತೆಗೆ ಯಾವಾಗಲೂ ಬದ್ಧವಾಗಿದೆ. ಶಾಂತಿಯೆಂಬುದು ಅಮೆರಿಕ ಮತ್ತು ನ್ಯಾಟೋ ದೇಶಗಳ ಮೂಗಿನ ನೇರಕ್ಕೆ ಆಗುವುದು ಸಾಧ್ಯವಿಲ್ಲ. ವಿಶ್ವ ಸಂಸ್ಥೆಯಲ್ಲಿ ಮೇಲಿನ ಯಾವ ದೇಶದ ನಾಗರಿಕ ಹತ್ಯೆಗಳ ವಿಷಯದಲ್ಲಿ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಪಾಶ್ಚಾತ್ಯ ದೇಶಗಳು ಎಂದೂ ಮಾಡಿಲ್ಲ ಎಂದು ಚೀನಾ ಜಾಡಿಸಿದೆ.

ಶೀತಲ ಸಮರ ಎಂಬುದು ಅಮೆರಿಕದಿಂದ ಜೀವಂತವಾಗಿ ಉಳಿದಿದೆ. ಅದು ರಶಿಯಾ ಬಣದ ಜೊತೆಗೆ ಮಾತ್ರವಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನವು ತನ್ನ ಲಾಭಕ್ಕೆ ಅರ್ಧಕ್ಕರ್ಧ ಭೂಗೋಳದಲ್ಲಿ ಶೀತಲ ಸಮರವನ್ನು ಗುಪ್ತವಾಗಿ ಜಾರಿಯಲ್ಲಿ ಇಟ್ಟಿದೆ ಎಂದು ಜಾವೋ ಹೇಳಿದರು.

Join Whatsapp
Exit mobile version