Home ಟಾಪ್ ಸುದ್ದಿಗಳು ಬಿಜೆಪಿ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದ ಪ್ರಕರಣವನ್ನು ರಾತ್ರೋರಾತ್ರಿ ಮುಚ್ಚಿ ಹಾಕಿದ್ಯಾಕೆ: ಡಿಕೆಶಿ ಪ್ರಶ್ನೆ

ಬಿಜೆಪಿ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದ ಪ್ರಕರಣವನ್ನು ರಾತ್ರೋರಾತ್ರಿ ಮುಚ್ಚಿ ಹಾಕಿದ್ಯಾಕೆ: ಡಿಕೆಶಿ ಪ್ರಶ್ನೆ

ಹುಬ್ಬಳ್ಳಿ: ದೇಶಭಕ್ತಿಯ ಬಗ್ಗೆ ಮಾತಾಡುವ ಬಿಜೆಪಿ ನಾಯಕರು ಮಂಡ್ಯದಲ್ಲಿ ತಮ್ಮ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಪ್ರಕರಣವನ್ನು ಯಾಕೆ ಮುಚ್ಚಿಹಾಕಿದರು? ನಾವಾದರೋ ವಿಧಾನ ಸೌಧದಲ್ಲಿ ಕೂಗಿದ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ಮಾಡಿಸುತ್ತಿದ್ದೇವೆ. ದೇಶದ ಬಗ್ಗೆ ನಮಗಿರುವ ಬದ್ಧತೆ ಅವರಿಗಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.


ವಿಧಾನ ಸೌಧದ ಒಳಗಡೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದ ಹಿನ್ನೆಲೆಯಲ್ಲಿ ತಾವು ರಾಜೀನಾಮೆ ನೀಡಬೇಕು ಎನ್ನುತ್ತಿರುವ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಅದ್ಯಾವ ನೈತಿಕತೆಯಿಂದ ಅವರು ರಾಜೀನಾಮೆ ಕೇಳುತ್ತಾರೆ? ದೇಶಭಕ್ತಿಯ ಬಗ್ಗೆ ಮಾತಾಡುವ ಬಿಜೆಪಿ ನಾಯಕರು ಮಂಡ್ಯದಲ್ಲಿ ತಮ್ಮ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಪ್ರಕರಣವನ್ನು ಯಾಕೆ ಮುಚ್ಚಿಹಾಕಿದರು? ನಾವಾದರೋ ವಿಧಾನ ಸೌಧದಲ್ಲಿ ಕೂಗಿದ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ಮಾಡಿಸುತ್ತಿದ್ದೇವೆ. ದೇಶದ ಬಗ್ಗೆ ನಮಗಿರುವ ಬದ್ಧತೆ ಅವರಿಗಿದೆಯಾ? ನಮ್ಮಲ್ಲಿರುವ ರಾಷ್ಟ್ರಭಕ್ತಿ ಅವರಲ್ಲಿದೆಯಾ? ಎಂದು ಶಿವಕುಮಾರ್ ಪ್ರಶ್ನಿಸಿದರು.

ಮಂಡ್ಯದ ಪ್ರಕರಣಕ್ಕೆ ಎಫ್ ಎಸ್ ಎಲ್ ವೆರಿಫಿಕೇಶನ್ ಬೇಕಿಲ್ಲ. ಯಾಕೆಂದರೆ, ಒಬ್ಬ ಕಾರ್ಯಕರ್ತ ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿದ ಬಳಿಕ ಅವನ ಹಿಂದೆ ನಿಂತಿದ್ದ ಮತ್ತೊಬ್ಬ ಕಾರ್ಯಕರ್ತ ಅವನ ಬಾಯಿ ಮುಚ್ಚುತ್ತಾನೆ ಎಂದು ಹೇಳಿದ ಶಿವಕುಮಾರ್ ಆ ಪ್ರಕರಣವನ್ನು ಆಗಿನ ಬಿಜೆಪಿ ಸರ್ಕಾರ ರಾತ್ರೋರಾತ್ರಿ ಮುಚ್ಚಿಹಾಕಿದ್ಯಾಕೆ ಎಂದು ಕೇಳಿದರು.

Join Whatsapp
Exit mobile version