ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟರ್ ಖಾತೆ ನಿರ್ಬಂಧಿಸಿರುವುದು ಯಾಕೆ ? | ವಿಸ್ಕೃತವಾಗಿ ವಿವರಿಸಿದ ಶಶಿ ತರೂರ್

Prasthutha|

ಅಮೆರಿಕದ ಡಿಜಿಟಲ್‌ ಮಿಲೇನಿಯಮ್‌ ಕಾಪಿರೈಟ್‌ ಆ್ಯಕ್ಟ್ (ಡಿಎಂಸಿಎ) ತುಂಬ ಹೈಪರ್‌ ಆ್ಯಕ್ಟಿವ್‌ ಆಗಿದೆ. ಕಾಪಿರೈಟ್‌ ಹೊಂದಿರುವ ಸಂಗೀತ ಬಳಕೆಯಾದರೂ ಟ್ವಿಟರ್‌ ನಿರ್ಬಂಧ ಹೇರುತ್ತದೆ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದ್ದಾರೆ.

- Advertisement -

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಅವರ ಟ್ವಿಟರ್‌ ಖಾತೆ ಒಂದು ಗಂಟೆ ಸ್ಥಗಿತಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಶಶಿ ತರೂರ್‌, ‘ರವಿ ಜೀ ನನಗೂ ಇಂತಹ ಅನುಭವ ಆಗಿದೆ. ಡಿಎಂಸಿಎ ಅತಿ ಚುರುಕಾಗಿ ಕಾರ್ಯನಿರ್ವಹಿಸುತ್ತದೆ’ ಎಂದಿದ್ದಾರೆ.
ಉದಾಹರಣೆಯಾಗಿ ನಿರ್ಬಂಧಗೊಂಡ ತಾವು ಅಪ್‌ಲೋಡ್‌ ಮಾಡಿದ್ದ ಕೆಲವು ಟ್ವಿಟರ್‌ ಪೋಸ್ಟ್‌ಗಳನ್ನು ಶಶಿ ತರೂರ್‌ ಉಲ್ಲೇಖಿಸಿದ್ದಾರೆ.

ಕೇರಳದ ಸಾಂಪ್ರದಾಯಿಕ ಉಡುಗೆ ತೊಟ್ಟ ಯುವತಿಯೊಬ್ಬಳು ಅಮೆರಿಕದ ಹಾಡೊಂದಕ್ಕೆ ನರ್ತಿಸುತ್ತಿರುವ ವಿಡಿಯೊ ಪೋಸ್ಟ್‌ ಮಾಡಿರುವ ತರೂರ್‌, ‘ಈ ವಿಡಿಯೊ ಮೇಲೆ ಟ್ವಿಟರ್‌ ನಿರ್ಬಂಧ ಹೇರುತ್ತದೆ. ಕಾರಣ ಇದರಲ್ಲಿ ಬಳಕೆಯಾಗಿರುವುದು ಬೋನಿ ಎಂ ಎಂಬ ಹಾಡುಗಾರರ ತಂಡದ ರಾಸ್‌ಪುಟಿನ್‌ ಎಂಬ ಹಾಡಾಗಿದೆ. ಕಾಪಿರೈಟ್‌ ಇರುವ ಕಾರಣ ಈ ವಿಡಿಯೊವನ್ನು ಟ್ವಿಟರ್‌ ಡಿಲೀಟ್‌ ಮಾಡುತ್ತದೆ’ ಎಂದು ವಿವರಿಸಿದ್ದಾರೆ. ಪೋಸ್ಟ್‌ ಮಾಡಿದ ಸ್ವಲ್ಪ ಸಮಯದಲ್ಲೇ ವಿಡಿಯೊವನ್ನು ಟ್ವಿಟರ್‌ ತೆಗೆದು ಹಾಕಿದೆ. ‘ಟ್ವಿಟರ್‌ನ ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಲಾಕ್‌ ಮಾಡಲಾದ ಖಾತೆಯನ್ನು ಪುನಃ ಸಕ್ರಿಯಗೊಳ್ಳುವಂತೆ ಮಾಡುತ್ತದೆ’ ಎಂದು ಶಶಿ ತರೂರ್‌ ಹೇಳಿದ್ದಾರೆ.

- Advertisement -

ಟಿವಿ ಚಾನೆಲ್‌ ಒಂದರ ಸಂದರ್ಶನದಲ್ಲಿ ಟ್ವಿಟರ್‌ನ ಕಾರ್ಯವೈಖರಿಯನ್ನು ಪ್ರಬಲವಾಗಿ ಟೀಕಿಸಿದ್ದೆ. ತಮ್ಮ ಹೇಳಿಕೆಯಲ್ಲಿ ಪರಿಣಾಮಕಾರಿ ಸಂದೇಶವಿತ್ತು. ಆದ್ದರಿಂದ ಟ್ವಿಟರ್‌ ಅದರ ಮೇಲೆ ನಿರ್ಬಂಧ ಹೇರಿದೆ. ತಮ್ಮ ಖಾತೆಯನ್ನು ಒಂದು ಗಂಟೆ ಸ್ಥಗಿತಗೊಳಿಸುವ ಮೂಲಕ ವಾಕ್‌ ಸ್ವಾತಂತ್ರ್ಯಕ್ಕೆ ಟ್ವಿಟರ್‌ ಧಕ್ಕೆ ತಂದಿದೆ. ತನ್ನ ಅಜೆಂಡಾಗೆ ವಿರುದ್ಧ ವಿರುವ ಪೋಸ್ಟ್‌ಗಳನ್ನು ಟ್ವಿಟರ್‌ ಡಿಲೀಟ್‌ ಮಾಡುತ್ತಿದೆ ಎಂದು ಸಚಿವ ರವಿ ಶಂಕರ್‌ ಪ್ರಸಾದ್‌ ಸರಣಿ ಟ್ವೀಟ್‌ನಲ್ಲಿ ಆಪಾದಿಸಿದ್ದಾರೆ.

ಅಮೆರಿಕದ ಡಿಜಿಟಲ್‌ ಮಿಲೇನಿಯಂ ಹಕ್ಕುಸ್ವಾಮ್ಯ ಕಾಯ್ದೆಯ (ಡಿಎಂಸಿಎ) ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಟ್ವಿಟರ್‌ ಸಂಸ್ಥೆಯು ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ಅವರ ಟ್ವಿಟರ್‌ ಖಾತೆಯನ್ನೇ ಶುಕ್ರವಾರ ಒಂದು ಗಂಟೆ ಕಾಲ ತಡೆಹಿಡಿದಿತ್ತು.



Join Whatsapp