Home ಟಾಪ್ ಸುದ್ದಿಗಳು ನಮ್ಮ ಪ್ರಧಾನಿ ಚೀನಾ ಅಧ್ಯಕ್ಷರ ಹಿಂದೆ ಏಕೆ ಓಡುತ್ತಿದ್ದಾರೆ: ಉವೈಸಿ ಪ್ರಶ್ನೆ

ನಮ್ಮ ಪ್ರಧಾನಿ ಚೀನಾ ಅಧ್ಯಕ್ಷರ ಹಿಂದೆ ಏಕೆ ಓಡುತ್ತಿದ್ದಾರೆ: ಉವೈಸಿ ಪ್ರಶ್ನೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರನ್ನು ಲಡಾಖ್ ಗಡಿ ವಿಚಾರದಲ್ಲಿ ಕತ್ತಲಲ್ಲಿಡುತ್ತಿದ್ದಾರೆ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.


“ಮೊದಲು ಚೀನಾ ಮಾತನಾಡಲು ಬಯಸಿದೆ ಎನ್ನಲಾಯಿತು. ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಮಾತುಕತೆಯ ನಂತರ ಅಧಿಕೃತವಾಗಿ ವಿದೇಶಾಂಗ ಸಚಿವಾಲಯ ಹೇಳಿಕೆಯನ್ನು ಬಿಡುಗಡೆ ಮಾಡಬೇಕಿತ್ತು. ಚೀನಾದ ವಿದೇಶಾಂಗ ಸಚಿವಾಲಯವು ಭಾರತದ ಪ್ರಧಾನಿ ಮೋದಿ ಮಾತನಾಡಲು ಬಯಸಿದೆ ಎಂದು ಹೇಳಿದೆ. ಆದರೆ ನಂತರ ನಮ್ಮ ವಿದೇಶಾಂಗ ಕಾರ್ಯದರ್ಶಿ ಹೇಳೋದು ಚೀನಾ ಅಧ್ಯಕ್ಷರು ಮಾತನಾಡಲು ಬಯಸಿದ್ದಾರೆ ಎಂದು ಹೇಳಿದ ಉವೈಸಿ, ನಾನು ಬಿಜೆಪಿಯನ್ನು ಕೇಳಲು ಬಯಸುತ್ತೇನೆ, ಚೀನಾ ಅಧ್ಯಕ್ಷರ ಹಿಂದೆ ಮಾತನಾಡಲು ಪ್ರಧಾನಿ ಏಕೆ ಓಡುತ್ತಿದ್ದಾರೆ, ಲಡಾಖ್ ಗಡಿಯಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಪ್ರಧಾನಿ ರಾಷ್ಟ್ರದ ನಾಗರಿಕರನ್ನು ಏಕೆ ಕತ್ತಲೆಯಲ್ಲಿ ಇಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.


‘ತಮ್ಮ ಪರಿಹಾರವನ್ನು ಒಪ್ಪಿಕೊಳ್ಳುವಂತೆ ಪ್ರಧಾನಿ ಮೋದಿ ಸರಕಾರ ಸೇನೆಯ ಮೇಲೆ ಒತ್ತಡ ಹೇರಲು ಕಾರಣವೇನು? ಚೀನಾ ಸೈನಿಕರಿಗೆ ಪುರಸ್ಕಾರ ಕೊಡಲು ಇವರೇಕೆ ಬಯಸುತ್ತಾರೆ?.ಬಿಜೆಪಿ ಸರಕಾರ ಈ ಬಗ್ಗೆ ಮೌನ ವಹಿಸುತ್ತಿರುವುದೇಕೆ? ಎಂದು ಕೇಳಿದ ಉವೈಸಿ, 2000 ಕಿಮೀ ಚದರ ಪ್ರದೇಶದ ನಷ್ಟದ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ನಾವು ಒತ್ತಾಯಿಸುತ್ತೇವೆ ಎಂದರು.

Join Whatsapp
Exit mobile version