Home ಟಾಪ್ ಸುದ್ದಿಗಳು ಮುಸ್ಲಿಮರಿಗೂ ಅನುದಾನ ನೀಡಿದರೆ ಬಿಜೆಪಿ ಆಕ್ಷೇಪ ಯಾಕೆ: ಮುಸ್ಲಿಂ ಯುನಿಟಿ ಪ್ರಶ್ನೆ

ಮುಸ್ಲಿಮರಿಗೂ ಅನುದಾನ ನೀಡಿದರೆ ಬಿಜೆಪಿ ಆಕ್ಷೇಪ ಯಾಕೆ: ಮುಸ್ಲಿಂ ಯುನಿಟಿ ಪ್ರಶ್ನೆ

ಇಳಕಲ್: ಹುಬ್ಬಳ್ಳಿಯ ಮುಸ್ಲಿಂ ಧರ್ಮ ಗುರುಗಳ ಸಮಾವೇಶದಲ್ಲಿ ಈ ರಾಜ್ಯದ ಸಿಎಂ ಮುಸ್ಲಿಮರಿಗೂ ಈ ದೇಶದ ಆಸ್ತಿಯಲ್ಲಿ ಪಾಲು ಸಿಗಬೇಕು. ಅದರಂತೆ ರಾಜ್ಯದ ಮುಸಲ್ಮಾನರಿಗೆ ₹ 10 ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಹೇಳಿದ್ದು ಸರಿಯಾಗಿದೆ. ಆದರೆ ಈ ಹೇಳಿಕೆಗೆ ಬಿಜೆಪಿಗರು ಆಕ್ಷೇಪಿಸಿ, ಬೊಬ್ಬೆ ಹೊಡೆಯುತ್ತಿರುವುದು ಯಾಕೆ ಎಂದು ಕರ್ನಾಟಕ ಮುಸ್ಲಿಂ ಯುನಿಟಿಯ ರಾಜ್ಯ ಘಟಕದ ಅಧ್ಯಕ್ಷ ಜಬ್ಬಾರ ಕಲಬುರ್ಗಿ ಪ್ರಶ್ನಿಸಿದ್ದಾರೆ.

ಅಧಿಕಾರ ಇರುವಾಗ ಬಿಜೆಪಿಯವರು ಸಣ್ಣ-ಸಣ್ಣ ಸಮುದಾಯಗಳ, ಜಾತಿಗಳ ಓಲೈಕೆ ಮಾಡುವ ಮೂಲಕ ಮತ ಪಡೆಯುವ ರಾಜಕಾರಣ ಮಾಡಿಲ್ಲವೇ? ಜಾತಿಗೊಂದು ನಿಗಮ ಮಂಡಳಿ ಸೃಜಿಸಿ ಓಲೈಕೆ ಮಾಡಿಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ.

ಶೇ 99 ರಷ್ಟು ಮುಸ್ಲಿಮರು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತಂದಿದ್ದಾರೆ. ಹೀಗಾಗಿ ಧಾರ್ಮಿಕ ಅಲ್ಪಸಂಖ್ಯಾತರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವುದನ್ನು ಮನಗಂಡು ಅನುದಾನ ಬಿಡುಗಡೆ ಮಾಡುವುದು ಸರಿಯಾಗಿದೆ. ಈ ದೇಶದಲ್ಲಿ‌ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲರಿಗೂ ಪಾಲು ಸಿಗಬೇಕಾಗಿದೆ. ಅದನ್ನೇ ಸಿಎಂ ಹೇಳಿದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Join Whatsapp
Exit mobile version