Home ಟಾಪ್ ಸುದ್ದಿಗಳು ದೇಶದ್ರೋಹ ಕಾಯ್ದೆಯನ್ನು ಇನ್ನೂ ಉಳಿಸಿಕೊಂಡಿದ್ದೇಕೆ: ಕೇಂದ್ರದ ವಿರುದ್ಧ ಸುಪ್ರೀಮ್ ಕೋರ್ಟ್ ಗರಂ

ದೇಶದ್ರೋಹ ಕಾಯ್ದೆಯನ್ನು ಇನ್ನೂ ಉಳಿಸಿಕೊಂಡಿದ್ದೇಕೆ: ಕೇಂದ್ರದ ವಿರುದ್ಧ ಸುಪ್ರೀಮ್ ಕೋರ್ಟ್ ಗರಂ

ನವದೆಹಲಿ, ಜುಲೈ 15: ಬ್ರಿಟಿಷ್ ಯುಗದ ದೇಶದ್ರೋಹ ಕಾನೂನನ್ನು “ವಸಾಹತುಶಾಹಿ” ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್, “ಸ್ವಾತಂತ್ರ್ಯ ನಂತರದ 75 ವರ್ಷಗಳ ನಂತರವೂ ಈ ಕಾನೂನು ಇನ್ನೂ ಈ ದೇಶಕ್ಕೆ ಅಗತ್ಯವಿದೆಯೇ” ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.


ಇದು ಕಾನೂನು ಸಂಸ್ಥೆಗಳ ಕಾರ್ಯಚಟುವಟಿಕೆಗೆ ಗಂಭೀರ ಬೆದರಿಕೆಯಾಗಿದೆ ಮತ್ತು ಸರ್ಕಾರದ ನಡೆಯನ್ನು ಬೆಡಗಿ ಕೈಯಲ್ಲಿರುವ ಗರಗಸಕ್ಕೆ ಹೋಲಿಸಿದ ಸುಪ್ರೀಮ್ ಕೊರ್ಟ್, ಈ ಕಾಯ್ದೆಯನ್ನು ಸರ್ಕಾರ ಹೊಣೆಗಾರಿಕೆಯಿಲ್ಲದೆ ದುರುಪಯೋಗ ಪಡಿಸುವ ಸಾಧ್ಯತೆಯನ್ನು ಬೊಟ್ಟುಮಾಡಿದೆ.


ದೇಶದ್ರೋಹ ವಸಾಹತುಶಾಹಿ ಕಾನೂನು. ಸ್ವಾತಂತ್ರ್ಯದ 75 ವರ್ಷಗಳ ನಂತರವೂ ನಮಗೆ ಈ ಕಾನೂನು ಬೇಕೇ ಎಂದು ಸುಪ್ರೀಮ್ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಪ್ರಶ್ನಿಸಿದರು. ಕಾನೂನು ಪುಸ್ತಕದಿಂದ ಹಲವಾರು ದಿನಾಂಕದ ಕಾನೂನುಗಳನ್ನು ತೆಗೆದುಕೊಳ್ಳುವಾಗ ಸರ್ಕಾರ ಈ ಕಾನೂನಿನ ಕಡೆಗೆ ಗಮನ ಹರಿಸಿಲ್ಲವೆಂದು ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ರವರು ಈ ಕಾನೂನನ್ನು ಮಾರ್ಗಸೂಚಿಗಳೊಂದಿಗೆ ಉಳಿಸಿಕೊಳ್ಳಬಹುದೆಂದು ತನ್ನ ವಾದದ ಸಂದರ್ಭದಲ್ಲಿ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸಲಹೆ ನೀಡಿದರು.

ಮುಖ್ಯ ನ್ಯಾಯಾಧೀಶರ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠವು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಅನ್ನು ದೇಶದ್ರೋಹದ ಕಾಯ್ದೆಯನ್ನು ಮರದ ತುಂಡನ್ನು ಕತ್ತರಿಸಲು ಬಡಗಿಗೆ ಗರಗಸ ಕೊಟ್ಟಂತೆಯೆಂದು ವರ್ಣಿಸಿದ್ದ ಕೋರ್ಟ್, ಸರ್ಕಾರವು ದೇಶದೋಹ ಕಾನೂನನ್ನು ದುರುಪಯೋಗಪಡಿಸುವ ಸಾಧ್ಯತೆಯಿದೆಯೆಂದು ತಿಳಿಸಿದೆ.

ಹಳ್ಳಿ ಪ್ರದೇಶದಲ್ಲಿ ಪೊಲೀಸರಿಗೆ ಯಾರನ್ನಾದರೂ ಗುರಿಪಡಿಸುವ ಸಲುವಾಗಿ ದೇಶದ್ರೋಹ ಪ್ರಕರಣವಾದ 124 ಎ ದಾಖಲು ಮಾಡಲು ಸಾಧ್ಯತೆಯಿರುವುದರಿಂದ ಜನರು ಭಯಭೀತರಾಗಿದ್ದಾರೆ. ಈ ಕಾಯ್ದೆಯನ್ನು ಪರಿಶೀಲನೆ ನಡೆಸುವಂತೆ ಕೋರಿ ಮಾಜಿ ಸೇನಾಧಿಕಾರಿಯಾದ ಎಸ್‌ ಜಿ ವೊಂಬಟ್‌ ಕೆರೆ ಅವರು ಸುಪ್ರೀಮ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋರ್ಟ್ ನಿಂದ ಈ ಹೇಳಿಕೆ ಹೊರಬಿದ್ದಿದೆ. ಮಾತ್ರವಲ್ಲದೆ ಈ ಕಾನೂನನ್ನು ಬ್ರಿಟಿಷರು ಮಹಾತ್ಮ ಗಾಂಧಿಯನ್ನು ಮೌನಗೊಳಿಸಲು ಮತ್ತು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ಬಳಸಿದ್ದಾರೆಂದು ಸುಪ್ರೀಮ್ ಕೋರ್ಟ್ ಈ ಸಂದರ್ಭದಲ್ಲಿ ಪ್ರಸ್ತಾಪಿಸಿತು.
ಮಾತ್ರವಲ್ಲದೇ ಬಾಕಿಯಿರುವ 124 ಎ ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ಆಲಿಸಲಾಗುವುದು ಮತ್ತು ಕಾನೂನಿನ ಅಭಿವೃದ್ಧಿಗೊಳಿಸುವ ಕ್ರಮ ಕೈಗೊಳ್ಳಲಾಗುವುದೆಂದು ನ್ಯಾಯಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Join Whatsapp
Exit mobile version