ಟೀಮ್ ಇಂಡಿಯಾದ ‘ಮೆಂಟರ್’ ಆಗಿ ಧೋನಿ ನೇಮಕವಾಗಲು ಕಾರಣವೇನು ಗೊತ್ತಾ ?

Prasthutha|

ನವದೆಹಲಿ: ‘ಭಾರತೀಯ ಕ್ರಿಕೆಟ್’ನಲ್ಲಿ ಮುಖ್ಯಕೋಚ್ ರವಿಶಾಸ್ತ್ರಿ ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಜೋಡಿಯನ್ನು ನಿಯಂತ್ರಿಸುವ ಸಲುವಾಗಿಯೇ ICC T-20 ವಿಶ್ವಕಪ್ ವೇಳೆ ಟೀಮ್ ಇಂಡಿಯಾದ ಮೆಂಟರ್ ಆಗಿ ಮಾಜಿ ನಾಯಕ ಎಂಎಸ್ ಧೋನಿಯನ್ನು ಬಿಸಿಸಿಐ ನೇಮಕ ಮಾಡಿತ್ತು’ ಎಂದು ಭಾರತ ತಂಡದ ಮಾಜಿ ವೇಗಿ ಅತುಲ್ ವಾಸನ್  ಅಚ್ಚರಿಯ ಹೇಳಿಕೆ ನೀಡಿದ್ದಾರೆ.

- Advertisement -

‘ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಧೋನಿಯನ್ನು ಮೆಂಟರ್ ಆಗಿ ನೇಮಿಸಲಾಗಿತ್ತು. ತಂಡದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಬಯಸುವವರನ್ನು ಕೊಹ್ಲಿ ಹಾಗೂ ರವಿಶಾಸ್ತ್ರಿ ನಿಯಂತ್ರಿಸುತ್ತಿದ್ದರು. ಮುಕ್ತವಾಗಿ ಆಡಲು ಬಿಡುವುದಿಲ್ಲ ಎನ್ನುವ ಭಾವನೆ ತಂಡದ ಕೆಲ ಸದಸ್ಯರಲ್ಲಿತ್ತು ಎಂದು ಅತುಲ್ ವಾಸನ್ ಹೇಳಿದ್ದಾರೆ. ಯುಎಇಯಲ್ಲಿ ನಡೆದ ICC T-20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಮೆಂಟರ್ ಆಗಿ ಎಂಎಸ್ ಧೋನಿ ಆಯ್ಕೆಯಾದಾಗ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ ಪ್ರತಿಷ್ಠಿತ ICC ಟೂರ್ನಿಯಲ್ಲಿ  ಟೀಂ ಇಂಡಿಯಾ ಕನಿಷ್ಠ ಸೆಮಿಫೈನಲ್ ಹಂತಕ್ಕೇರಲೂ ಸಾಧ್ಯವಾಗದೇ ಹೊರಬಿದ್ದಿತ್ತು. ವಿರಾಟ್ ಕೊಹ್ಲಿಗೆ ಟಿ20 ತಂಡದ ನಾಯಕನಾಗಿ ಹಾಗೂ ರವಿಶಾಸ್ತ್ರಿಗೆ ತಂಡದ ಕೋಚ್ ಆಗಿ ಇದು ಕೊನೆಯ ಟೂರ್ನಿ ಆಗಿತ್ತು.

Join Whatsapp