Home ಟಾಪ್ ಸುದ್ದಿಗಳು ವಿಶ್ವಕಪ್ ಆಟ ನೋಡಲು ಹೋಗುವ ಪ್ರಧಾನಿಗೆ ಮಣಿಪುರಕ್ಕೆ ಹೋಗಲು ಆಗಲಿಲ್ಲವೇಕೆ?: ಪ್ರಿಯಾಂಕಾ

ವಿಶ್ವಕಪ್ ಆಟ ನೋಡಲು ಹೋಗುವ ಪ್ರಧಾನಿಗೆ ಮಣಿಪುರಕ್ಕೆ ಹೋಗಲು ಆಗಲಿಲ್ಲವೇಕೆ?: ಪ್ರಿಯಾಂಕಾ

ಜೈಪುರ: ಏಕದಿನ ಕ್ರಿಕೆಟ್‌ ವಿಶ್ವಕಪ್‌ ಪಂದ್ಯ ನೋಡಲು ಅಹಮದಾಬಾದ್‌ಗೆ ಹೋಗುವ ಪ್ರಧಾನಿಗೆ ಗಲಭೆ ಪೀಡಿತ ಮಣಿಪುರಕ್ಕೆ ಒಮ್ಮೆ ಹೋಗಲು ಆಗಲಿಲ್ಲವೇ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.

ರಾಜಸ್ಥಾನ ಚುನಾವಣಾ ರ‍್ಯಾಲಿಯಲ್ಲಿ ಅವರು ಮಾತನಾಡಿದರು. ಮಣಿಪುರದಲ್ಲಿ ಗಲಭೆ ಪ್ರಾರಂಭವಾಗಿ ಸುಮಾರು ಏಳು ತಿಂಗಳು ಕಳೆಯುತ್ತಿದೆ. ಆದರೆ ದೇಶದ ಪ್ರಧಾನಿಗೆ ಅಲ್ಲಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಅದೇ ಪ್ರಧಾನಿ ವಿಶ್ವಕಪ್‌ ಪಂದ್ಯ ವೀಕ್ಷಿಸಲು ತೆರಳಿದ್ದರು ಎಂದು ಪ್ರಿಯಾಂಕ ಆಕ್ಷೇಪಿಸಿದರು. ಭಾರತ ವಿಶ್ವಕಪ್‌ ಗೆದ್ದರೆ ಅದರ ಕ್ರೆಡಿಟ್‌’ ಪಡೆಯಲು ಮೋದಿ ಕ್ರೀಡಾಂಗಾಣಕ್ಕೆ ತೆರಳಿದ್ದರು ಎಂದೂ ಪ್ರಿಯಾಂಕ ಹೇಳಿದರು.

ಭಾರತ ಕ್ರಿಕೆಟ್‌ ತಂಡದವರು ಅವರ ಕಠಿಣ ಪರಿಶ್ರಮದಿಂದ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಿದರು. ಪ್ರಧಾನಿಯಾಗಿ ಪಂದ್ಯ ವೀಕ್ಷಣೆಗೆ ಹೋಗುವುದು ಹೆಮ್ಮೆ ಹಾಗೂ ಗೌರವ ಸಂಕೇತವಿರಬಹುದು. ಆದರೆ ಮಣಿಪುರಕ್ಕೆ ಹೋಗಲು ಆಗಲಿಲ್ಲವೇಕೆ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

ಉದ್ಯಮಿಗಳ ಸಾಲಮನ್ನಾ ಮಾಡುವುದಕ್ಕೆ ಆದ್ಯತೆ ನೀಡುವ ಮೋದಿ ಸರ್ಕಾರ, ಬಡವರ ಬಗ್ಗೆ ಚಿಂತಿಸುತ್ತಿಲ್ಲ ಎಂದೂ ಇದೇ ಸಮಯದಲ್ಲಿ ಪ್ರಿಯಾಂಕ ಹೇಳಿದ್ದಾರೆ.

ರಾಜಸ್ಥಾನದಲ್ಲಿ ನವೆಂಬರ್‌ 3ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್‌ 3ಕ್ಕೆ ಫಲಿತಾಂಶ ಹೊರಬರಲಿದೆ.

Join Whatsapp
Exit mobile version