Home ಅಂಕಣಗಳು RSS ಮತ್ತು ಬಿಜೆಪಿ ಭಾರತದ ಆರ್ಥಿಕತೆಯನ್ನು ಏಕೆ ಹಾಳುಮಾಡುತ್ತಿವೆ?

RSS ಮತ್ತು ಬಿಜೆಪಿ ಭಾರತದ ಆರ್ಥಿಕತೆಯನ್ನು ಏಕೆ ಹಾಳುಮಾಡುತ್ತಿವೆ?

ಆರ್ ಎಸ್ ಎಸ್ ನ ಮುಖ್ಯಸ್ಥ ಗೋಲ್ವಾಲ್ಕರ್ ಅವರ We or our Nationhood Defined ಪುಸ್ತಕವನ್ನು ನೀವು ಓದಿದರೆ, ಭಾರತದ ಆರ್ಥಿಕತೆಯ ಸೊಂಟ ಮುರಿಯುವುದು ಆರ್ ಎಸ್ ಎಸ್ ನ ಮುಖ್ಯ ಉದ್ದೇಶವಾಗಿದೆ ಎಂದು ನೀವು ಅರ್ಥಮಾಡಿಕೊಳ್ಳುವಿರಿ, ಇದನ್ನು ಗೋಲ್ವಾಲ್ಕರ್ ಪುಸ್ತಕದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ.

  • ನಿರಂತರವಾಗಿ ಅಧಿಕಾರದಲ್ಲಿರಲು ದೇಶವನ್ನು 95% ನಷ್ಟು ಹಾಳು ಮಾಡುವುದು ಅತ್ಯವಶ್ಯಕ ಎಂದು ಗೋಲ್ವಾಲ್ಕರ್ ಪ್ರತಿಪಾದಿಸುತ್ತಾರೆ.
  • ಗೋಲ್ವಾಲ್ಕರ್ ಅವರ ಪ್ರಕಾರ, 95% ದೇಶದ ಪ್ರಜೆಗಳನ್ನು ಬಡವರನ್ನಾಗಿ ಇಟ್ಟು ಅವರನ್ನು ಗುಲಾಮರಂತೆ ಪರಿಗಣಿಸಬೇಕು. ಆ ಗುಲಾಮ ಬಡವರನ್ನು ನಾವು ಸರ್ವಶಕ್ತರನ್ನಾಗಿ ಮಾಡುತ್ತೇವೆ ಎನ್ನುವ ಆಶ್ವಾಸನೆಗಳ ಮೂಲಕ ಅಧಿಕಾರವನ್ನು ಶಾಶ್ವತವಾಗಿ ಪಡೆದುಕೊಳ್ಳಬಹುದು ಎನ್ನುವುದು.
  • ಡೆಮೋನಿಟೈಸೇಶನ್, ಜಿಎಸ್ಟಿ, ಬ್ಯಾಂಕುಗಳ ಎನ್ ಪಿಎಗಳು, ಪಿಎಂಸಿಗಳು, ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡುವುದು, ಉದ್ಯೋಗವನ್ನು ಕಡಿತಗೊಳಿಸುವುದು, ಗಲಭೆಗಳನ್ನು ಹುಟ್ಟುಹಾಕಿ ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿಗೆ ಹಾನಿ ಮಾಡುವುದುˌ ಸಂವಿಧಾನವನ್ನು ದುರ್ಬಲಗೊಳಿಸುವುದು, ಸಣ್ಣ ಸಣ್ಣ ಉದ್ಯಮಗಳ ಬಾಗಿಲು ಮುಚ್ಚಿಸುವುದುˌ ಮತ್ತು ಈಗ ಬ್ಯಾಂಕ್ ಗಳನ್ನು ಮುಳುಗಿಸುವುದುˌ ವೊಡಾಫೋನ್ ಸೇರಿದಂತೆ ಅನೇಕ ಕಂಪನಿಗಳನ್ನು ಮುಳುಗುವಂತೆ ಅನಿವಾರ್ಯತೆಯ ವಾತಾವರಣ ನಿರ್ಮಿಸುವುದು ಈ ಎಲ್ಲ ಇಂದಿನ ಪಿತೂರಿಗಳು ನೋಡಿದಾಗ ಗೋಳ್ವಾಲ್ಕರ್ ಬರೆದ ಪುಸ್ತಕದಲ್ಲಿ ಸಂಗತಿ ನಿಜವೆನ್ನಿಸದೆ ಇರದು.
  • ಯುಎನ್ ವರದಿಯ ಪ್ರಕಾರ, 2016 ರಿಂದ 2018 ರವರೆಗೆ 1095 ಶ್ರೀಮಂತ ಭಾರತೀಯರು ಭಾರತವನ್ನು ತೊರೆದು ವಿದೇಶದಲ್ಲಿ ನೆಲೆಸಿದ್ದಾರೆ. ಇದರಿಂದಾಗಿ ಟ್ರಿಲಿಯನ್ ಕೋಟಿ ಆಸ್ತಿಪಾಸ್ತಿ ವಿದೇಶಗಳ ಪಾಲಾಗಿದೆ.
  • ಸರ್ಕಾರದ ನೀತಿಗಳಿಂದಾಗಿ, ಅನೇಕ ಸಣ್ಣ ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೋದ್ಯಮಿಗಳು ಡೀಫಾಲ್ಟರ್ ಗಳಾಗಿದ್ದಾರೆ. ಆದರೆ ಇನ್ನೊಂದು ಕಡೆ ಕೆಲವೇ ಕೆಲವು ಕೈಗಾರಿಕೋದ್ಯಮಿಗಳ ಸಂಪತ್ತು ಸಾವಿರಾರು ಪಟ್ಚು ವೃದ್ಧಿಸಿದೆ. ಸಂಪತ್ತು ಹೆಚ್ಚಿಸಿಕೊಂಡ ಈ ಕೈಗಾರಿಕೋದ್ಯಮಿಗಳೆಂದರೆ ಅಂಬಾನಿ, ಅದಾನಿ, ರಾಮದೇವ್ ಮತ್ತು ಬಿಜೆಪಿಯ ಅನೇಕ ವಿಶೇಷ ವ್ಯಕ್ತಿಗಳೆಂಬುದು ನಿಮಗೆಲ್ಲ ತಿಳಿದಿದೆ.
  • ಯಾವ ಉದ್ಯಮಿಗಳು ಬಿಜೆಪಿಯವರ ಮಾತು ಕೇಳುವುದಿಲ್ಲವೊ ಅವರನ್ನು ಭಾರತದಿಂದ ಹೊರಹೋಗುವಂತ ವಾತಾವರಣ ಸೃಷ್ಟಿಸಲಾಗುತ್ತಿದೆ ಮತ್ತು ಅವರನ್ನು ಮುಳುಗಿಸಿಲಾಗುತ್ತಿದೆ.
  • ದೇಶದ ಆರ್ಥಿಕತೆ ಈ ಪ್ರಮಾಣದಲ್ಲಿ ಮುಳುಗುತ್ತಿದ್ದರೂ ಸರಕಾರ ನಿಶ್ಚಿಂತೆಯಿಂದ ಇರುವುದನ್ನು ನೋಡಿದರೆ ಇದೊಂದು ವ್ಯವಸ್ಥಿತ ಷಡ್ಯಂತರ ಎಂದು ತಿಳಿಯಬಹುದಾಗಿದೆ.
    *ಈ ಎಲ್ಲ ಸಂಗತಿಗಳನ್ನು ಒಟ್ಟಾಗಿ ನೋಡಿದರೆ ಈ ದೇಶವನ್ನು ದುರ್ಬಲಗೊಳಿಸಿ ಅದನ್ನು ಹಾಳು ಮಾಡುತ್ತಿರುವುದು ಗೋಲ್ವಾಲ್ಕರ್ ಪುಸ್ತಕದಲ್ಲಿ ಬರೆದಂತೆ ನಡೆಯುತ್ತಿರುವುದು ಗೊತ್ತಾಗುತ್ತದೆ.
  • ತನ್ನ ಪುಸ್ತಕದಲ್ಲಿ ಗೋಲ್ವಾಲ್ಕರ್ ಮುಂದುವರೆದು ಬರೆಯುತ್ತಾರೆ: ಒಂದು ಉತ್ತಮ ಆಡಳಿತವು ತನ್ನ ರಾಜ್ಯದ ಜನರ ಆದಾಯವನ್ನು ಎಲ್ಲ ಕಾಲಕ್ಕೂ ಕನಿಷ್ಠ ಮಟ್ಟದಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ದೇಶದಲ್ಲಿ ಶ್ರೀಮಂತ ನಾಗರಿಕರ ಸಂಖ್ಯೆ ವೃದ್ಧಿಸಿದರೆ ಅವರನ್ನು ನಿಯಂತ್ರಿಸುವುದು ಕಷ್ಟಕರ. ಆದ್ದರಿಂದ ಸರಕಾರ ನಡೆಸುವವರಿಗೆ ನಿಷ್ಠರಾಗಿರುವ ಆಯ್ದ ಕೆಲವೆ ಕೆಲವು ಬೆರಳೆಣಿಕೆಯ ಜನರ ಕೈಯಲ್ಲಿ ಸಂಪತ್ತು ಕೇಂದ್ರೀಕೃತವಾಗಿರಬೇಕು.
  • ಗೋಲ್ವಾಲ್ಕರ್ ತನ್ನ ಪುಸ್ತಕದಲ್ಲಿ ಪ್ರಸ್ತಾಪಿಸಿದ ಸಂಗತಿಗಳನ್ನು ಜ್ಞಾಪಿಸಿಕೊಂಡು ಇಂದಿನ ಸರ್ಕಾರದ ಆರ್ಥಿಕ ನೀತಿಗಳನ್ನು ಒಮ್ಮೆ ಅವಲೋಕಿಸಿರಿ. ಸರಕಾರದ ನಿಯಂತ್ರಣ ಯಾರ ಕೈಯಲ್ಲಿದೆ ಎಂಬ ಸಂಗತಿ ನಿಮಗೆ ಅರ್ಥವಾಗುತ್ತದೆ.
Join Whatsapp
Exit mobile version