ಬೆಂಗಳೂರು: ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ದ್ವೇಷಿಸುವ ಬಿಜೆಪಿ ನಾಯಕರು ಈಗ್ಯಾಕೆ ಸುಮ್ಮನಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು ಮತ್ತು ಭ್ರಷ್ಟಾಚಾರದ ಅರೋಪಗಳ ಹಿನ್ನೆಲೆಯಲ್ಲೇ ಯಡಿಯೂರಪ್ಪ ಎರಡು ಬಾರಿ ರಾಜೀನಾಮೆ ಸಲ್ಲಿಸಬೇಕಾಗಿತ್ತು, ಬಿಜೆಪಿ ನಾಯಕರೇ ಒಮ್ಮೆ ಅವರನ್ನು ಕಣ್ಣೀರು ಹಾಕುತ್ತಾ ವೇದಿಕೆಯಿಂದ ಕೆಳಗಿಳಿಯುವಂತೆ ಮಾಡಿದ್ದರು ಎಂದು ಹೇಳಿದರು.
ಬಿಜೆಪಿ ವರಿಷ್ಠರು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ವಿರುದ್ಧ ಮಾತಾಡುತ್ತಾರೆ, ತಾನು ಮಲ್ಲಿಕಾರ್ಜುನ ಖರ್ಗೆ ಅವರ ಮಗನಾಗಿದ್ದರಿಂದ ರಾಜಕಾರಣದಲ್ಲಿ ಅವಕಾಶಗಳು ಸಿಗುತ್ತಿವೆ ಅಂತ ಹೇಳುತ್ತಾರೆ, ಅದರೆ ತಾನು ಯುವ ಕಾಂಗ್ರೆಸ್ಸಿಗನಾಗಿ ಪಟ್ಟ ಶ್ರಮವನ್ನು ತೇಜಸ್ವೀ ಸೂರ್ಯನಂಥವರು ಕಡೆಗಣಿಸುತ್ತಾರೆ. ಈಗ ಬಿಜೆಪಿ ನಾಯಕರಲ್ಲಿ ಉತ್ತರವಿದೆಯಾ ಎಂದು ಪ್ರಶ್ನಿಸಿದ್ದಾರೆ.