Home ಟಾಪ್ ಸುದ್ದಿಗಳು ಹೂ ಈಸ್ ಈಶ್ವರಪ್ಪ?: ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ

ಹೂ ಈಸ್ ಈಶ್ವರಪ್ಪ?: ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ

ಬೆಂಗಳೂರು: ರಾಜ್ಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ರಾಧಾಮೋಹನ್ ದಾಸ್ ಅಗರ್ವಾಲ್‌ರನ್ನು ಈಶ್ವರಪ್ಪ ಬಂಡಾಯದ ಬಗ್ಗೆ ಕೇಳಿದ್ದಕ್ಕೆ, ಯಾರು ಅವರು, ನನಗೆ ಆ ಹೆಸರಿನ ಯಾರೂ ಗೊತ್ತಿಲ್ಲ ಎಂದಿದ್ದಾರೆ.

ಕರ್ನಾಟಕಕ್ಕೆ ಬಂದ ಅಗರ್ವಾಲ್ ಬೀದರ್​ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ನಂತರ ಅವರನ್ನು ವರದಿಗಾರರು ಮಾತನಾಡಿಸಿದ್ದಾರೆ. ಈಶ್ವರಪ್ಪ ಬಂಡಾಯವಾಗಿ ಸ್ಪರ್ಧೆಗೆ ಸಿದ್ಧರಾಗಿದ್ದಾರೆ, ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ವರದಿಗಾರರು ಅವರ ಪ್ರತಿಕ್ರಿಯೆ ಕೇಳಿದ್ದಾರೆ. ಅದಕ್ಕೆ ಅಗರ್ವಾಲ್, “ಹೂ ಈಸ್ ದಿಸ್ ಕೆ.ಎಸ್. ಈಶ್ವರಪ್ಪ, ಐ ಡೊಂಟ್ ನೋ ಈಶ್ವರಪ್ಪ” ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತೂ ಒಂದು ಸಲ ಈಶ್ವರಪ್ಪ ಯಾರು‌ ಎಂದು‌ ಕೇಳಿದ ಬಿಜೆಪಿ ಚುನಾವಣಾ ಉಸ್ತುವಾರಿ, ಈಶ್ವರಪ್ಪ ನಾಮಪತ್ರ ಹಾಕಿ ತಪ್ಪು ಮಾಡದೋದು ಬಿಟ್ಟು, ತಮ್ಮ ನಾಮಪತ್ರ ವಾಪಸ್ ಪಡೆದು ತಮ್ಮ ತಪ್ಪು ತಿದ್ದಿಕೊಳ್ಳಬಹುದು. ಇದು ಈಶ್ವರಪ್ಪ ಸುಧಾರಣೆಗೆ ಬಿಜೆಪಿ ನೀಡುವ ಅವಕಾಶ ಎಂದು ಹೇಳಿದ್ದಾರೆ.

Join Whatsapp
Exit mobile version