Home ಟಾಪ್ ಸುದ್ದಿಗಳು ಎಂಎಲ್‌ಸಿ ಆಗಲಿರುವ ಬಲ್ಕಿಸ್ ಬಾನು

ಎಂಎಲ್‌ಸಿ ಆಗಲಿರುವ ಬಲ್ಕಿಸ್ ಬಾನು

ಶಿವಮೊಗ್ಗ: ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ನಿನ್ನೆ ಏಳು ಸ್ಥಾನಗಳ ಜೊತೆಗೆ ಮುಂಬರುವ ಪರಿಷತ್ ಉಪ ಚುನಾವಣೆಗೂ ಕೂಡ ಅಭ್ಯರ್ಥಿ ಘೋಷಿಸಿದೆ. ಅಲ್ಪಸಂಖ್ಯಾತ ಕೋಟದಡಿ ಬಲ್ಕಿಸ್ ಬಾನು ಎಂಬ ಮಹಿಳೆಗೂ ಕಾಂಗ್ರೆಸ್​​ ವಿಧಾನ ಪರಿಷತ್​ಗೆ ಟಿಕೆಟ್​ ನೀಡಲಾಗಿದೆ.

ಬಲ್ಕಿಸ್ ಬಾನು ಯಾರು?

ಬಲ್ಕಿಸ್ ಬಾನು ಭದ್ರಾವತಿ ತಾಲ್ಲೂಕಿನ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ನಂತರ ರಾಜಕೀಯವಾಗಿ ತೊಡಗಿಸಿಕೊಂಡಿದ್ದಾರೆ. ಶಿವಮೊಗ್ಗದ ಜಿಪಂ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ.

ಜನತಾದಳದಲ್ಲಿ ಮೊದಲು ಗುರುತಿಸಿಕೊಂಡ ಅವರು, ಜನತಾದಳದಲ್ಲಿ ಇದ್ದಾಗ ಶಿವಮೊಗ್ಗ ಜಿಲ್ಲಾ ಪಂಚಾಯತ್​​ಗೆ 1994-95 ರಲ್ಲಿ ಅಧ್ಯಕ್ಷರಾಗಿದ್ದರು. ಬಳಿಕ 2014 ರಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಅವರೀಗ ಈ ಬಾರಿ ಎಂಎಲ್​​ಸಿ ಆಗಿ ಆಯ್ಕೆಯಾಗಲಿದ್ದಾರೆ.

ತಮಗೆ ಎಂಎಲ್‌ಸಿ ಟಿಕೆಟ್ ಘೋಷಣೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಲ್ಕಿಸ್ ಬಾನು ಅಭಿನಂದನೆ ಸಲ್ಲಿಸಿದ್ದಾರೆ. ನಾನು ಜಿಲ್ಲಾ ಪರಿಷತ್ ಸದಸ್ಯಳಾಗಿದ್ದಾಗಿನಿಂದಲೂ ತಳಮಟ್ಟದಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಇಂದು ನನ್ನ ಕೆಲಸದ ಮೇಲೆ ನಂಬಿಕೆ ಇಟ್ಟು ಪಕ್ಷ ಹೊಸ ಜವಾಬ್ದಾರಿ ನೀಡಿದೆ. ಇದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಬಲ್ಕಿಸ್ ಬಾನು ಹೇಳಿದ್ದಾರೆ‌.

ಬಲ್ಕಿಸ್ ಬಾನು ಸೇರಿ ಕಾಂಗ್ರೆಸ್‌ನ ಏಳು ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್‌ನ ಏಳು ಅಭ್ಯರ್ಥಿಗಳೂ ಜಯಿಸುವ ಸಾಧ್ಯತೆ ಇದೆ.

Join Whatsapp
Exit mobile version