ಕೊರೋನಿಲ್ ಕಿಟ್ ಅಧಿಕೃತವಲ್ಲವೆಂದ WHO । ಸಂಕಷ್ಟದಲ್ಲಿ ಪತಂಜಲಿ

Prasthutha|

- Advertisement -

ಕಳೆದ ವರ್ಷ ಕೊರೋನವೈರಸ್ ತಡೆಗಟ್ಟಲು ಅದರ ಪರಿಣಾಮಕಾರಿತ್ವದ ಬಗ್ಗೆ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದ ಯೋಗ ಗುರು ರಾಮ್ದೇವ್ ಅವರ ‘ಕೊರೋನಿಲ್ ಕಿಟ್’ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ಕೊರೋನ ವೈರಸ್ ಚಿಕಿತ್ಸೆಗಾಗಿ ಆಯುಷ್ ಸಚಿವಾಲಯವು ಪತಂಜಲಿ ಆಯುರ್ವೇದದ ಕೊರೊನಿಲ್ ಅನ್ನು ಅನುಮೋದಿಸಿದರೂ, COVID-19 ಚಿಕಿತ್ಸೆಗಾಗಿ ಯಾವುದೇ ಸಾಂಪ್ರದಾಯಿಕ ಔಷಧದ ಪರಿಣಾಮಕಾರಿತ್ವವನ್ನು ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

ಕೊರೋನಿಲ್ ಕಿಟ್‌ನ ಉಡಾವಣಾ ಸಮಾರಂಭದಲ್ಲಿ “ಡಬ್ಲ್ಯುಎಚ್‌ಒ ಪ್ರಮಾಣೀಕರಣ ಯೋಜನೆಯ ಪ್ರಕಾರ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌(CDSCO)ನ ಆಯುಷ್ ವಿಭಾಗದಿಂದ ಕೊರೋನಿಲ್ ಔಷಧೀಯ ಉತ್ಪನ್ನದ ಪ್ರಮಾಣಪತ್ರವನ್ನು  ಸ್ವೀಕರಿಸಿದ್ದೇವೆ”ಎಂದು ಪತಂಜಲಿ ಹೇಳಿಕೆ ನೀಡಿತ್ತು. ಆದರೆ WHO, “COVID-19 ಚಿಕಿತ್ಸೆಗಾಗಿ ಯಾವುದೇ ಸಾಂಪ್ರದಾಯಿಕ ಔಷಧದ ಪರಿಣಾಮಕಾರಿತ್ವವನ್ನು WHO ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ” ಎಂದು ಟ್ವೀಟ್ ಮಾಡಿದೆ.

- Advertisement -

ಕಂಪನಿಯು “COVID-19 ಗಾಗಿ ಮೊದಲ ಸಾಕ್ಷ್ಯ ಆಧಾರಿತ ಔಷಧ” ಎಂದು ಬಿಲ್ ಮಾಡಿದೆ.ಆದರೆ ಈಗ ಈ ಹಕ್ಕುಗಳನ್ನು ಡಬ್ಲ್ಯುಎಚ್‌ಒ ತಿರಸ್ಕರಿಸಿದೆ.  ಪತಂಜಲಿ ಸಿಇಒ ಆಚಾರ್ಯ ಬಾಲ್ಕೃಷ್ಣ ತನ್ನ ಟ್ವಿಟರಿನಲ್ಲಿ “ಕೊರೋನಿಲ್ ಗೆ ನಮ್ಮ WHO ಜಿಎಂಪಿ ಕಂಪ್ಲೈಂಟ್ ಸಿಒಪಿಪಿ ಪ್ರಮಾಣಪತ್ರವನ್ನು ಭಾರತ ಸರ್ಕಾರದ ಡಿಸಿಜಿಐ ನೀಡಿದೆ ಎಂಬುದನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ”.ಎಂದು ಹೇಳಿದ್ದರು.

ಪತಂಜಲಿ ಕಳೆದ ವರ್ಷ ಜೂನ್ 23 ರಂದು ಆಯುರ್ವೇದ ಮೂಲದ ಕೊರೋನಿಲ್ ಅನ್ನು ಪರಿಚಯಿಸಿತ್ತು. ಕಿಟ್‌ಗೆ ಅದರ ಪರಿಣಾಮಕಾರಿತ್ವದ ಬಗ್ಗೆ ವೈಜ್ಞಾನಿಕ ಪುರಾವೆಗಳಿಲ್ಲದ ಕಾರಣ ಕಂಪನಿಯು ತೀವ್ರ ಟೀಕೆಗಳನ್ನು ಎದುರಿಸಬೇಕಾಗಿತ್ತು. ನಂತರ COVID-19 ಅನ್ನು ತಡೆಯುವುದಾಗಿ ಹೇಳಿಕೊಳ್ಳುವ ಕೊರೋನಿಲ್ ಕಿಟ್‌ನ ಜಾಹೀರಾತುಗಳನ್ನು ನಿಲ್ಲಿಸುವಂತೆ ಆಯುಷ್ ಸಚಿವಾಲಯವು ಪತಂಜಲಿ ಆಯುರ್ವೇದಕ್ಕೆ ಆದೇಶಿಸಿತ್ತು. ಆ ಬಳಿಕ ಕೊರೋನಿಲ್ ಕಿಟ್ ಅನ್ನು ಇಮ್ಯೂನಲ್ ಬೂಸ್ಟರ್ ಎಂಬಂತೆ ಪರಿಚಯಿಸಲಾಗಿತ್ತು.

Join Whatsapp