ನವದೆಹಲಿ: ಇತ್ತೀಚೆಗೆ ಕಾಣಿಸಿಕೊಂಡಿದ್ದ ಮಂಕಿಪಾಕ್ಸ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇದನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ನಿರ್ಧರಿಸಿದ್ದಾರೆ.
ಮಂಕಿಪಾಕ್ಸ್ ವಿಚಾರವಾಗಿ ಇತ್ತೀಚೆಗಷ್ಟೆ ಆರೋಗ್ಯ ತಜ್ಞರು ಚರ್ಚೆಯನ್ನು ನಡೆಸಿದ್ದರು.
ಈ ವಿಚಾರವಾಗಿ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಹೊಂದಿರುವ WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್‌ಗೆ ತಜ್ಞರ ಸಮಿತಿಯು ಈ ಕುರಿತಾಗಿ ಸಲಹೆಯನ್ನೂ ನೀಡಿದೆ.
ಮಂಕಿಪಾಕ್ಸ್ ಪ್ರಕರಣದಲ್ಲಿ ಗಣನೀಯ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕಾಳಜಿಯ ಮೇರೆಗೆ ಮಂಕಿಪಾಕ್ಸ್ ನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ನಿರ್ಧರಿಸಿರುವುದಾಗಿ WHO ಟ್ವೀಟ್ ಮಾಡಿದೆ.