Home ರಾಷ್ಟ್ರೀಯ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು ಯಾವುವು? ಇಲ್ಲಿದೆ ಪಟ್ಟಿ

ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು ಯಾವುವು? ಇಲ್ಲಿದೆ ಪಟ್ಟಿ

ನವದೆಹಲಿ: ಭಾರತದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಪ್ರಾಬಲ್ಯ ಮುಂದುವರಿದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 15 ಕಾರುಗಳಲ್ಲಿ ಮಾರುತಿ ಕಂಪನಿಯದ್ದೇ ಹೆಚ್ಚು. ಮಾರುತಿ ಎರ್ಟಿಗಾ ಸೆಪ್ಟೆಂಬರ್ ನಲ್ಲಿ ಅತಿಹೆಚ್ಚು ಮಾರಾಟವಾದ ಕಾರಾಗಿದೆ.


ಸೆಪ್ಟೆಂಬರ್ ನಲ್ಲಿ 17,441 ಎರ್ಟಿಗಾ ಕಾರುಗಳ ಮಾರಾಟವಾಗಿದೆ. ಮಾರುತಿ ಸುಜುಕಿಯ ಸ್ವಿಫ್ಟ್ ಕಾರುಗಳು 16,241 ಯೂನಿಟ್ ಮಾರಾಟವಾಗಿವೆ.


ಟಾಪ್ 15 ಪಟ್ಟಿಯಲ್ಲಿ ಮಾರುತಿ ಸುಜುಕಿಯ 9 ಮಾಡಲ್ ಗಳು ಸೇರಿವೆ.


2024ರ ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು

  1. ಮಾರುತಿ ಎರ್ಟಿಗಾ: 17,441 ಕಾರು ಮಾರಾಟ
  2. ಮಾರುತಿ ಸ್ವಿಫ್ಟ್: 16,241
  3. ಹ್ಯುಂಡೈ ಕ್ರೆಟಾ: 15,902
  4. ಮಾರುತಿ ಬ್ರೆಜ್ಜಾ: 15,322
  5. ಮಹೀಂದ್ರ ಸ್ಕಾರ್ಪಿಯೋ: 14,438
  6. ಮಾರುತಿ ಬಲೇನೋ: 14,292
  7. ಮಾರುತಿ ಫ್ರಾಂಕ್ಸ್: 13,874
  8. ಟಾಟಾ ಪಂಚ್: 13,711
  9. ಮಾರುತಿ ವ್ಯಾಗನ್ ಆರ್: 13,339
  10. ಮಾರುತಿ ಈಕೋ: 11,908
  11. ಟಾಟಾ ನೆಕ್ಸನ್: 11,470
  12. ಮಾರುತಿ ಡಿಜೈರ್: 10,853
  13. ಕಿಯಾ ಸೋನೆಟ್: 10,335
  14. ಮಾರುತಿ ಗ್ರ್ಯಾಂಡ್ ವಿಟಾರ: 10,267
  15. ಹ್ಯುಂಡೈ ವೆನ್ಯೂ: 10,259
Join Whatsapp
Exit mobile version