Home ಟಾಪ್ ಸುದ್ದಿಗಳು ಅಭದ್ರತೆ ಕಾಡಿದಾಗಲೆಲ್ಲಾ ಬಿಜೆಪಿಗೆ ದೇಶಪ್ರೇಮ ಉಕ್ಕುತ್ತೆ: ಆಯನೂರು ಮಂಜುನಾಥ್

ಅಭದ್ರತೆ ಕಾಡಿದಾಗಲೆಲ್ಲಾ ಬಿಜೆಪಿಗೆ ದೇಶಪ್ರೇಮ ಉಕ್ಕುತ್ತೆ: ಆಯನೂರು ಮಂಜುನಾಥ್

ಶಿವಮೊಗ್ಗ: ಬಿಜೆಪಿಯವರಿಗೆ ಯಾವಾಗ ರಾಜಕೀಯ ಅಭದ್ರತೆ ಕಾಡುತ್ತೋ ಆಗ ದೇಶಪ್ರೇಮ ಬಿಜೆಪಿಗರಿಗೆ ಉಕ್ಕುತ್ತೆ. ಆಗ ಬಿಜೆಪಿಯವರು ಏನೇನೋ ಹೇಳಿಕೆ ನೀಡಿ ತಾವು ಇರುವಿಕೆ ತೋರಿಸುತ್ತಾರೆ. ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದರೂ ಬಿಜೆಪಿ ಯಾವ ಎಂಪಿಯೂ ಪ್ರಶ್ನೆ ಮಾಡಿಲ್ಲ. ರಾಜ್ಯದಲ್ಲಿ ಬಲಗಾಲವಿದ್ದರೂ ಕೇಂದ್ರ ಸರ್ಕಾರ ಒಂದು ಪೈಸೆಯು ಬರ ಪರಿಹಾರ ನೀಡಿಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕಿಡಿಗಾರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಕೆಲವು ದಿನಗಳಿಂದ ಸಂಸದ ಡಿ.ಕೆ.ಸುರೇಶ್ ಅವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ವ್ಯಕ್ತಮಾಡಿದ್ದಾರೆ. ಅವರ ಬಾಯ್ತಪ್ಪಿನಿಂದ ಬಂದ ಒಂದು ಪದವನ್ನು ಇಟ್ಟುಕೊಂಡು ರಾಷ್ಟ್ರಪ್ರೇಮ ಮೆರೆಯುತ್ತಿರುವ ಬಿಜೆಪಿ ನಾಯಕರು ಅವರ ಒಳ್ಳೆಯ ಉದ್ದೇಶವನ್ನು ಗಮನಿಸಿಲ್ಲ ಎಂದರು. ರಾಜ್ಯಕ್ಕೆ ಆದ ಅನ್ಯಾಯವನ್ನು ಹೇಳುವುದು ತಪ್ಪಾ? ಎಂದು ಪ್ರಶ್ನಿಸಿದರು.


ಮೇಕೆದಾಟು ಯೋಜನೆ, ಮಹದಾಯಿ ಯೋಜನೆ,ವಿಐಎಸ್ ಐಎಲ್ ಕಾರ್ಖಾನೆ, ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಹಾಗೂ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ವಿಚಾರದಲ್ಲಿ ಮೌನವಾಗಿರುವ ಬಿಜೆಪಿ ನಾಯಕರಲ್ಲಿ ಸಮಾಜಘಾತುಕ, ಉದ್ರೇಕದಿಂದ ಮಾತನಾಡುವ ದೇಶಭಕ್ತಿ ಮುಗಿಲು ಮುಟ್ಟಿದೆ ಎಂದು ಆಯನೂರು ಮಂಜುನಾಥ್ ಹೇಳಿದರು.

Join Whatsapp
Exit mobile version