Home ಜಾಲತಾಣದಿಂದ ಹಿಜಾಬ್ ಹೆಸರಿನಲ್ಲಿ ಮಹಿಳೆಯರ ಶಿಕ್ಷಣಕ್ಕೆ ಕುತ್ತು ಬಂದಾಗ, ಫಾತಿಮಾ “ಅಮ್ಮಿ” ಅವರ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ:...

ಹಿಜಾಬ್ ಹೆಸರಿನಲ್ಲಿ ಮಹಿಳೆಯರ ಶಿಕ್ಷಣಕ್ಕೆ ಕುತ್ತು ಬಂದಾಗ, ಫಾತಿಮಾ “ಅಮ್ಮಿ” ಅವರ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ: ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರ ಬದುಕಿಗೆ ಅಕ್ಷರದ ದೀವಿಗೆ ಹಿಡಿದ, ಮೊಟ್ಟ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ “ಫಾತಿಮಾ ಶೇಖ್” ಅವರ ಜನ್ಮ ಜಯಂತಿಯ ನಮನಗಳು. ಹಿಜಾಬ್ ಹೆಸರಿನಲ್ಲಿ ಮಹಿಳೆಯರ ಶಿಕ್ಷಣಕ್ಕೆ ಕುತ್ತು ಬಂದಾಗ,ಫಾತೀಮಾ “ಅಮ್ಮಿ” ಅವರ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ ಎಂಬ ಪ್ರತಿಜ್ಞೆಯೊಂದಿಗೆ ಸ್ಮರಿಸುತ್ತೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.

ಭಾರತದ ಮೊದಲ ಮುಸ್ಲಿಮ್ ಶಿಕ್ಷಕಿ ಎಂದು ಖ್ಯಾತರಾಗಿರುವ ಫಾತಿಮಾ ಶೇಖ್ ಅವರು ಸಮಾಜ ಸುಧಾರಕರಾದ ಜ್ಯೋತಿರಾವ್ ಮತ್ತು ಸಾವಿತ್ರಿ ಬಾಯಿ ಪುಲೆ ಅವರ ಸಹವರ್ತಿಯಾಗಿದ್ದರು. ಫಾತಿಮಾ ಅವರು 1848ರಲ್ಲಿ ಶಾಲೆ ಸ್ಥಾಪಿಸಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ್ದರು. ಈ ಶಾಲೆಯಲ್ಲಿ ಹೆಚ್ಚಾಗಿ ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ಶಿಕ್ಷಣವನ್ನು ನಿರಾಕರಿಸಲ್ಪಟ್ಟ ದಲಿತ ಮತ್ತು ಮುಸ್ಲಿಮ್ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು.

ಜನ್ಮ ದಿನದ ಅಂಗವಾಗಿ ಫಾತಿಮಾ ಅವರಿಗೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

Join Whatsapp
Exit mobile version