Home ರಾಷ್ಟ್ರೀಯ ‘ಸದ್ಗುರು ಮಗಳಿಗೆ ಮದುವೆ, ಬೇರೆಯವರ ಮಕ್ಕಳಿಗೆ ಸನ್ಯಾಸತ್ವಕ್ಕೆ ಪ್ರೋತ್ಸಾಹವೇಕೆ:’ ಮದ್ರಾಸ್ ಹೈಕೋರ್ಟ್ ಪ್ರಶ್ನೆ

‘ಸದ್ಗುರು ಮಗಳಿಗೆ ಮದುವೆ, ಬೇರೆಯವರ ಮಕ್ಕಳಿಗೆ ಸನ್ಯಾಸತ್ವಕ್ಕೆ ಪ್ರೋತ್ಸಾಹವೇಕೆ:’ ಮದ್ರಾಸ್ ಹೈಕೋರ್ಟ್ ಪ್ರಶ್ನೆ

ಚೆನ್ನೈ: ಈಶಾ ಫೌಂಡೇಷನ್ ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಅವರ ಸ್ವಂತ ಮಗಳೇ ಮದುವೆ ಆಗಿದ್ದಾರೆ. ಆದರೆ, ಸದ್ಗುರು ಅವರ ಆಶ್ರಮದಲ್ಲಿ ಇರುವ ಮಹಿಳೆಯರಿಗೆ ಮಾತ್ರ ತಲೆ ಬೋಳಿಸಿಕೊಂಡು ಪ್ರಾಪಂಚಿಕ ವಿಷಯಗಳಿಂದ ದೂರವಾಗಿ ಸನ್ಯಾಸಿಗಳ ರೀತಿ ಬದುಕಲು ಏಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಮದ್ರಾಸ್ ಹೈಕೋರ್ಟ್ ಪ್ರಶ್ನೆ ಮಾಡಿದೆ.

ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಎಸ್. ಎಂ. ಸುಬ್ರಹ್ಮಣ್ಯಂ ಹಾಗೂ ವಿ. ಶಿವಜ್ಞಾನಂ ಅವರಿದ್ದ ಪೀಠ ಈಶಾ ಫೌಂಡೇಷನ್ ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಈ ಪ್ರಶ್ನೆ ಕೇಳಿದೆ.

ನಿವೃತ್ತ ಪ್ರೊಫೆಸರ್ ಒಬ್ಬರು ಸದ್ಗುರು ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ತಮ್ಮ ಇಬ್ಬರು ಸುಶಿಕ್ಷಿತ ಹೆಣ್ಣು ಮಕ್ಕಳಿಗೆ ಸದ್ಗುರು ‘ಬ್ರೈನ್ ವಾಶ್’ ಮಾಡಿದ್ದಾರೆ ಎಂದು ಆಪಾದಿಸಿದ್ದರು. ಸದ್ಗುರು ಅವರಿಗೆ ಸೇರಿದ ಈಶಾ ಯೋಗ ಕೇಂದ್ರದಲ್ಲಿ ತಮ್ಮ ಇಬ್ಬರು ಹೆಣ್ಣು ಮಕ್ಕಳು ಶಾಶ್ವತವಾಗಿ ನೆಲೆಸುವಂತೆ ಮಾಡಿದ್ದಾರೆ ಎಂದು ಆಪಾದಿಸಿ ನಿವೃತ್ತ ಪ್ರೊಫೆಸರ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಪ್ರಕರಣದ ವಿಚಾರಣೆ ನಡೆಸುವಾಗ ಮದ್ರಾಸ್ ಹೈಕೋರ್ಟ್ ಸದ್ಗುರು ಅವರಿಗೆ ಈ ಪ್ರಶ್ನೆ ಕೇಳಿದೆ.

Join Whatsapp
Exit mobile version