Home ಟಾಪ್ ಸುದ್ದಿಗಳು ಡಿ.31ರಿಂದ ಹಳೆಯ ಮೊಬೈಲ್ ಗಳಲ್ಲಿ ವಾಟ್ಸ್ ಆ್ಯಪ್ ಕಾರ್ಯ ನಿರ್ವಹಣೆ ಸ್ಥಗಿತ

ಡಿ.31ರಿಂದ ಹಳೆಯ ಮೊಬೈಲ್ ಗಳಲ್ಲಿ ವಾಟ್ಸ್ ಆ್ಯಪ್ ಕಾರ್ಯ ನಿರ್ವಹಣೆ ಸ್ಥಗಿತ

ಹೊಸದಿಲ್ಲಿ: ಡಿ.31ರಿಂದ ಹಳೆಯ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿರ್ವಹಣೆ ಸ್ಥಗಿತವಾಗಲಿದೆ.


2011, 2012 ಮತ್ತು 2013ರಲ್ಲಿ ಬಿಡುಗಡೆಯಾದ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಗಳಾದ ಗ್ಯಾಲಕ್ಸಿ ಏಸ್ 2, ಗ್ಯಾಲಕ್ಸಿ ಕೋರ್, ಗ್ಯಾಲಕ್ಸಿ ಎಸ್2, ಗ್ಯಾಲಕ್ಸಿ ಎಸ್3 ಮಿನಿ, ಗ್ಯಾಲಕ್ಸಿ ಟ್ರೆಂಡ್ 2, ಗ್ಯಾಲಕ್ಸಿ ಟ್ರೆಂಡ್ ಲೈಟ್ ಹಾಗೂ ಗ್ಯಾಲಕ್ಸಿ ಎಕ್ಸ್ ಕವರ್2 ಮೊಬೈಲ್’ಗಳಲ್ಲಿ ಆಂಡ್ರಾಯ್ಡ್ 4.ಎಕ್ಸ್ ಮೊಬೈಲ್ ಗಳು ಸೇರಿದಂತೆ ಕೆಲವೊಂದು ಹಳೆಯ ಅಪರೇಟಿಂಗ್ ಸಿಸ್ಟಮ್ ಇರುವ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸಾಪ್ ಸಫೋರ್ಟ್ ಮಾಡುವುದಿಲ್ಲ.


ಅದೇ ರೀತಿ ಹಳೆಯ ಅಪರೇಟಿಂಗ್ ಸಿಸ್ಟಮ್ ಇರುವ ಆ್ಯಪಲ್, ಹೆಚ್ ಟಿಸಿ, ಹುವೈ, ಲೆನಾವಾ, ಎಲ್ಜಿ, ಸೋನಿ ಸಹಿತ ಇತರ ಮೊಬೈಲ್’ಗಳಲ್ಲಿ ಡಿ.31ರಿಂದ ವಾಟ್ಸ್ಆ್ಯಪ್ ಕಾರ್ಯ ನಿರ್ವಹಣೆಯನ್ನು ನಿಲ್ಲಿಸಲಿದೆ ಎಂದು ವರದಿಗಳು ತಿಳಿಸಿವೆ.

Join Whatsapp
Exit mobile version