Home ಟಾಪ್ ಸುದ್ದಿಗಳು ವಾಟ್ಸಪ್ ಬಳಕೆದಾರರಿಗೆ ಮತ್ತೊಮ್ಮೆ ಹೊಸ ಗೌಪ್ಯತೆ ನೀತಿಯ ಬಿಸಿ; ಕೊನೆ ದಿನಾಂಕ ಯಾವುದು ಗೊತ್ತಾ?

ವಾಟ್ಸಪ್ ಬಳಕೆದಾರರಿಗೆ ಮತ್ತೊಮ್ಮೆ ಹೊಸ ಗೌಪ್ಯತೆ ನೀತಿಯ ಬಿಸಿ; ಕೊನೆ ದಿನಾಂಕ ಯಾವುದು ಗೊತ್ತಾ?

ನವದೆಹಲಿ : ಜನಪ್ರಿಯ ಸಾಮಾಜಿಕ ಜಾಲತಾಣ ವೇದಿಕೆ ವಾಟ್ಸಪ್ ಹೊಸ ಗೌಪ್ಯತಾ ನೀತಿಯ ಕುರಿತು ಮತ್ತೊಮ್ಮೆ ಮಾಹಿತಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಮೇ 15ರೊಳಗೆ ಹೊಸ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳಬೇಕು ಎಂದು ವಾಟ್ಸಪ್ ತನ್ನ ಬಳಕೆದಾರರಿಗೆ ತಿಳಿಸಿದೆ.

ವಾಟ್ಸಪ್ ಚಾಟ್ ನಲ್ಲಿ ಸಣ್ಣ ಬ್ಯಾನರ್ ಪ್ರದರ್ಶಿಸಲಾಗುತ್ತಿದೆ. ಮುಂದಿನ ವಾರಗಳಲ್ಲಿ ಜನರು ತಮ್ಮದೇ ಆದ ರೀತಿಯಲ್ಲಿ ಓದುವಂತೆ ಹೆಚ್ಚಿನ ಮಾಹಿತಿ ಒದಗಿಸಲಾಗುವುದು, ವಾಟ್ಸಪ್ ನಲ್ಲಿ ಹೊಸ ಗೌಪ್ಯತಾ ನೀತಿ 2021, ಮೇ 15ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

ವಾಟ್ಸಪ್ ತನ್ನ ಹೊಸ ಗೌಪ್ಯತೆ ನೀತಿಯನ್ನು ಭಾರತದಲ್ಲಿ ಹೊಸ ಅಭಿಯಾನದೊಂದಿಗೆ ಜಾರಿಗೊಳಿಸಲು ಮುಂದಾಗಿದೆ. ಫೇಸ್ಬುಕ್ ಒಡೆತನದ ವಾಟ್ಸಪ್ ಗೌಪ್ಯತೆ ನೀತಿಉನ್ನು ಸೂಕ್ಷ್ಮವಾಗಿ ಇಡಲು ಯತ್ನಿಸಿದೆ. ಹೊಸ ನೀತಿ ಬದಲಾವಣೆಗಳನ್ನು ಮೊದಲು ಮತ್ತು ನಂತರ ಸ್ವೀಕರಿಸಲು ತನ್ನ ಬಳಕೆದಾರರಿಗೆ ಸಾಕಷ್ಟು ಸಮಯ ನೀಡಿದೆ.

ಭಾರತದಲ್ಲಿ ವಾಟ್ಸಪ್ ಗೌಪ್ಯತೆ ಕುರಿತ ಚರ್ಚೆ ನಂತರ ನೀತಿ ಬದಲಾವಣೆಗೆ ಮುಂದಾಗಿದ್ದ ವಾಟ್ಸಪ್ ಕಳೆದ ತಿಂಗಳು ಭಾರೀ ಹಿನ್ನಡೆ ಅನುಭವಿಸುವಂತಾಗಿತ್ತು.

Join Whatsapp
Exit mobile version