Home ಟಾಪ್ ಸುದ್ದಿಗಳು ವಾಟ್ಸಾಪಿನಲ್ಲಿ ಹೊಸ ಫೀಚರ್: ಇನ್ಮುಂದೆ ಒಮ್ಮೆಲೆ 32 ಜನರಿಗೆ ಕರೆ ಮಾಡಬಹುದು

ವಾಟ್ಸಾಪಿನಲ್ಲಿ ಹೊಸ ಫೀಚರ್: ಇನ್ಮುಂದೆ ಒಮ್ಮೆಲೆ 32 ಜನರಿಗೆ ಕರೆ ಮಾಡಬಹುದು


🖊️Anon Suf

ವಾಷಿಂಗ್ಟನ್: ಇದೀಗ ವಾಟ್ಸ್ಆ್ಯಪ್ ಕೆಲವೊಂದು ಹೊಸ ಫೀಚರ್ಸ್ ಗಳನ್ನು ಬಿಡುಗಡೆ ಮಾಡುವುದರ ಬಗ್ಗೆ ಘೋಷಣೆ ಮಾಡಿದ್ದು ಇದರ ಪ್ರಕಾರ ವಾಟ್ಸ್ಆ್ಯಪ್ ಏಕಕಾಲಕ್ಕೆ 32 ಜನರು ಗ್ರೂಪ್ ವಾಯ್ಸ್ ಕಾಲ್ ಮಾಡಬಹುದಾದ ಆಯ್ಕೆ ನೀಡಲಿದೆ ಎಂದು ಕಂಪನಿಯು ತಿಳಿಸಿವೆ.

ಮೆಟಾ (Meta) ಒಡೆತನದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ ಗಳನ್ನು ಪರಿಚಯಿಸುತ್ತಲೇ ಬಂದಿದ್ದು ದಿನದಿಂದ ದಿನಕ್ಕೆ ವಾಟ್ಸ್ಆ್ಯಪ್ (WhatsApp) ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದೆ. ಇದೀಗ ವಾಟ್ಸ್ಆ್ಯಪ್ ಕೆಲವೊಂದು ಹೊಸ ಫೀಚರ್ ಗಳನ್ನು (Feature) ಬಿಡುಗಡೆ ಮಾಡುವುದರ ಬಗ್ಗೆ ಘೋಷಣೆ ಮಾಡಿದ್ದು ಈ ಮೂಲಕ ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯಲು ಮುಂದಾಗಿವೆ.

ಇದರ ಪ್ರಕಾರ ವಾಟ್ಸ್ಆ್ಯಪ್ ಏಕಕಾಲಕ್ಕೆ 32 ಜನರು ಗ್ರೂಪ್ ವಾಯ್ಸ್ ಕಾಲ್ ಮಾಡುವುದು ಮತ್ತು 2 ಜಿಬಿ (ಗೀಗಾ ಬೈಟ್) ಗಾತ್ರದ ಫೈಲ್ ಗಳನ್ನು ರವಾನಿಸುವುದು ಸೇರಿದಂತೆ ಹಲವಾರು ಹೊಸ ಫೀಚರ್ ಗಳನ್ನು ಸೇರಿಸಲಾಗುವುದು ಎಂದು ಕಂಪನಿ ಘೋಷಿಸಿದೆ.

ಪ್ರಸ್ತುತ ವಾಟ್ಸಾಪ್ ನಲ್ಲಿ ಕೇವಲ 8 ಜನರಿಗೆ ಮಾತ್ರ ಏಕಕಾಲಕ್ಕೆ ಗ್ರೂಪ್ ವಾಯ್ಸ್ ಕರೆಯನ್ನು ಮಾಡಬಹುದಾಗಿದೆ.

ಇದರ ಜೊತೆಗೆ ಹೊಸ ಕಮ್ಯೂನಿಟಿ ಫೀಚರ್ಸ್ ಅನ್ನು ವಾಟ್ಸ್ಆ್ಯಪ್ ಪರಿಚಯಿಸಿದೆ. ಈ ಪೀಚರ್ಸ್ ವಾಟ್ಸ್ಆ್ಯಪ್ ಗ್ರೂಪ್ ಗಳ ಗ್ರೂಪ್ ಮಾದರಿಯಲ್ಲಿದ್ದು, ತುಂಬಾ ವಿಸ್ತರವಾದ ವ್ಯಾಪ್ತಿಯನ್ನು ಹೊಂದಿದೆ. ಅಂದರೆ ಕಮ್ಯೂನಿಟಿ ಫೀಚರ್ಸ್ ಮೂಲಕ ಪರಸ್ಪರ ತಿಳಿದಿರುವ ಮತ್ತು ತಮ್ಮ ಆಸಕ್ತಿಗೆ ಅನುಗುಣವಾಗಿ ಸುತ್ತಲೂ ಸಂಘಟಿತವಾಗಿರುವ ಸಂಪರ್ಕಗಳನ್ನು ಹೊಂದಿರುವ ಗುಂಪುಗಳ ಪ್ರಕಾರವಾಗಿದೆ. ಇದಲ್ಲದೇ ವಾಟ್ಸ್ಆ್ಯಪ್ ಗ್ರೂಪ್ನ ಅಡ್ಮಿನ್, ಯಾವುದೇ ಸಮಯದಲ್ಲೂ ಸಂದೇಶವನ್ನು ಅಳಸಿಹಾಕಬಹುದು. ಅಳಿಸಿ ಹಾಕಿದ ಸಂಭಾಷಣೆಗಳು ಗ್ರೂಪ್ ನಲ್ಲಿರುವ ಸದಸ್ಯರಿಗೆ ಕಾಣಿಸದಂತೆ ಮಾಡುವ ಹೊಸ ಫೀಚರ್ ಅನ್ನು ಅಳವಡಿಸಲಾಗುವುದು ಎಂದು ಕಂಪನಿ ವಕ್ತಾರ ತಿಳಿಸಿದ್ದಾರೆ.

Join Whatsapp
Exit mobile version