Home ಟಾಪ್ ಸುದ್ದಿಗಳು ವಿಶ್ವಾದ್ಯಂತ ಸರ್ವರ್ ಡೌನ್ : 2 ಗಂಟೆಗಳ ಬಳಿಕ ವಾಟ್ಸ್ ಆ್ಯಪ್ ಸೇವೆ ಪುನಾರಂಭ

ವಿಶ್ವಾದ್ಯಂತ ಸರ್ವರ್ ಡೌನ್ : 2 ಗಂಟೆಗಳ ಬಳಿಕ ವಾಟ್ಸ್ ಆ್ಯಪ್ ಸೇವೆ ಪುನಾರಂಭ

ನವದೆಹಲಿ: ಮಂಗಳವಾರ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸ್ ಆ್ಯಪ್ ಸರ್ವರ್ ಡೌನ್ ಆಗಿದ್ದು, ಎರಡು ಗಂಟೆಗಳ ಬಳಿಕ ವಾಟ್ಸ್ ಆ್ಯಪ್ ಮತ್ತೆ ಕಾರ್ಯಾರಂಭಿಸಿದೆ.


ಆದರೆ ಈ ಬಗ್ಗೆ ವಾಟ್ಸ್ ಆ್ಯಪ್ ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ವಾಟ್ಸಾಪ್‌ ತೆರೆಯಲು ಸಾಧ್ಯವಾಗುತ್ತಿದೆ. ಆದರೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಬಳಕೆದಾರರು ದೂರಿದ್ದರು.

ಡೌನ್‌ ಡಿಟೆಕ್ಟರ್‌ ಪ್ರಕಾರ ಶೇ 69ರಷ್ಟು ಬಳಕೆದಾರರು ಈ ಸಮಸ್ಯೆ ಎದುರಿಸಿದ್ದರು. ಶೇ 21ರಷ್ಟು ಬಳಕೆದಾರರಿಗೆ ಸರ್ವರ್‌ ಸಂಪರ್ಕ ಸಿಕ್ಕಿರಲಿಲ್ಲ. ಶೇ 9ರಷ್ಟು ಮಂದಿ ತಮ್ಮ ಸ್ಮಾರ್ಟ್‌ ಫೋನ್‌ ಆ್ಯಪ್‌ ಗಳಲ್ಲಿ ಗುರುತಿಸಲಾಗದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದಿತ್ತು. 

ಸದ್ಯ ಬಳಕೆದಾರರಿಗೆ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು, ವೀಡಿಯೋ ಕಾಲ್ ಹಾಗೂ ಆಡಿಯೋ ಕಾಲ್ ಮಾಡಲು ಆಗುತ್ತಿರಲಿಲ್ಲ. ಈ ಮತ್ತೆ ಸೇವೆ ಆರಂಭವಾಗಿದೆ.

Join Whatsapp
Exit mobile version