Home ಟಾಪ್ ಸುದ್ದಿಗಳು ವಾಟ್ಸಾಪ್ ಸಂಸ್ಥೆಯ ಭಾರತೀಯ ಮುಖ್ಯಸ್ಥ ರಾಜೀನಾಮೆ

ವಾಟ್ಸಾಪ್ ಸಂಸ್ಥೆಯ ಭಾರತೀಯ ಮುಖ್ಯಸ್ಥ ರಾಜೀನಾಮೆ

ನವದೆಹಲಿ: ಮೆಟಾ ಒಡೆತನದಲ್ಲಿರುವ ವಾಟ್ಸಾಪ್ ಕಂಪೆನಿಯ ಭಾರತೀಯ ಮುಖ್ಯಸ್ಥರಾದ ಅಭಿಜಿತ್ ಬೋಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೆಟಾ ಸಂಸ್ಥೆಯ ಭಾರತೀಯ ಮುಖ್ಯಸ್ಥ ಅಜಿತ್ ಮೋಹನ್ ಅವರು ತನ್ನ ಪ್ರತಿಸ್ಪರ್ಧಿ ಸ್ನ್ಯಾಪ್’ನಲ್ಲಿ ಮತ್ತೊಂದು ಹುದ್ದೆಯನ್ನು ಪಡೆಯಲು ರಾಜೀನಾಮೆ ನೀಡಿದ ಎರಡು ವಾರಗಳ ಬಳಿಕ ಮೆಟಾ ಸಂಸ್ಥೆಯ ಮತ್ತೋರ್ವ ಪ್ರಮುಖರಾದ ರಾಜೀವ್ ಅಗರ್ವಾಲ್ ಕೂಡ ಇಂದು ರಾಜೀನಾಮೆ ನೀಡಿದ್ದಾರೆ ಎಂದು ವಾಟ್ಸಾಪ್ ದೃಢಪಡಿಸಿದೆ. ಈ ಮಧ್ಯೆ ವಾಟ್ಸಾಪ್’ನ ಭಾರತದ ಮುಖ್ಯಸ್ಥ ಅಭಿಜಿತ್ ಬೋಸ್ ಅವರು ಕೂಡ ರಾಜೀನಾಮೆ ನೀಡಿದ್ದಾರೆ ಮೆಟಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಾಜೀವ್ ಅಗರ್ವಾಲ್ ಅವರು ಮತ್ತೊಂದು ಅವಕಾಶವನ್ನು ಮುಂದುವರಿಸಲು ಮೆಟಾದಲ್ಲಿನ ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದು, ಅವರ ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಸುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ವಾಟ್ಸಾಪ್’ನ ಮೊದಲ ಮುಖ್ಯಸ್ಥರಾಗಿ ಅಭಿಜಿತ್ ಬೋಸ್ ಅವರ ಅತ್ಯುತ್ತಮ ಕೊಡುಗೆಗಳಿಗಾಗಿ ಸಂಸ್ಥೆಯ ಮುಖ್ಯಸ್ಥ ವಿಲ್ ಕ್ಯಾತ್’ಕಾರ್ಟ್ ಅವರು ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

Join Whatsapp
Exit mobile version