Home ಟಾಪ್ ಸುದ್ದಿಗಳು ಮಕ್ಕಳ ಅನುಕೂಲಕ್ಕೆ ಪಠ್ಯಕ್ರಮ ಬದಲಾಯಿಸಿದರೆ ತಪ್ಪೇನು ?: ಗೀತಾ ಶಿವರಾಜ್ ಕುಮಾರ್

ಮಕ್ಕಳ ಅನುಕೂಲಕ್ಕೆ ಪಠ್ಯಕ್ರಮ ಬದಲಾಯಿಸಿದರೆ ತಪ್ಪೇನು ?: ಗೀತಾ ಶಿವರಾಜ್ ಕುಮಾರ್

ಮೈಸೂರು : ಮಕ್ಕಳ ಅನುಕೂಲಕ್ಕೆ ಪಠ್ಯಕ್ರಮ ಬದಲಾಯಿಸಿದರೆ ತಪ್ಪೇನು ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.


ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಪಠ್ಯಪುಸ್ತದಲ್ಲಿ ಒಳ್ಳೆಯ ವಿಚಾರಗಳು ಮಾತ್ರ ಇರಬೇಕು. ಈ ಕಾರಣಕ್ಕಾಗಿ ಪಠ್ಯ ಪುಸ್ತಕ ಬದಲಾವಣೆ ಆದರೆ ಒಳ್ಳೆಯದು ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.


ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಗೀತಾ ಶಿವರಾಜ್ ಕುಮಾರ್ ನಿರಾಕರಿಸಿದ್ದು ಈ ಮೂಲಕ ಮತ್ತಷ್ಟು ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ .


ಪಕ್ಷಿ ವೀಕ್ಷಣೆಗೆಂದು ಬಂದಿದ್ದೇವೆ, ಇಲ್ಲಿ ರಾಜಕೀಯ ವಿಚಾರ ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾರೆ.

Join Whatsapp
Exit mobile version