Home ಟಾಪ್ ಸುದ್ದಿಗಳು ಏನನ್ನು ತಿನ್ನಬೇಕು, ತಿನ್ನಬಾರದು ಎಂಬುದು ವ್ಯಕ್ತಿಯ ನಿರ್ಧಾರ: ಮೊಟ್ಟೆ ವಿತರಣೆ ಬಗ್ಗೆ ಸಚಿವ ಮಹದೇವಪ್ಪ

ಏನನ್ನು ತಿನ್ನಬೇಕು, ತಿನ್ನಬಾರದು ಎಂಬುದು ವ್ಯಕ್ತಿಯ ನಿರ್ಧಾರ: ಮೊಟ್ಟೆ ವಿತರಣೆ ಬಗ್ಗೆ ಸಚಿವ ಮಹದೇವಪ್ಪ

ಮೈಸೂರು: ಏನನ್ನು ತಿನ್ನಬೇಕು, ತಿನ್ನಬಾರದು ಎಂಬುದನ್ನು ನಿರ್ಧರಿಸುವುದು ವ್ಯಕ್ತಿಗೆ ಬಿಟ್ಟಿದ್ದು. ಕೆಲವು ಮೂರ್ಖರು ಪಾಳೇಗಾರಿಕೆ ಮಾಡುತ್ತಿರುತ್ತಾರೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.


ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮ ದಡಿ ವಾರದಲ್ಲಿ 2 ದಿನ ಬೇಯಿಸಿದ ಮೊಟ್ಟೆ, ಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ನಗರದ ಮಹಾರಾಜ ಪ್ರೌಢಶಾಲೆಯಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.


ಮೊಟ್ಟೆ ತಿನ್ನಬೇಡಿ, ಹಾಲು ಕುಡಿಯಿರಿ ಎನ್ನುತ್ತಾರೆ. ಆದರೆ, ಯಾರ ಹಕ್ಕನ್ನೂ ಕಸಿದುಕೊಳ್ಳಲು ಸಂವಿಧಾನದಲ್ಲಿ ಅವಕಾಶವಿಲ್ಲ’ ಎಂದರು.

Join Whatsapp
Exit mobile version