Home ಟಾಪ್ ಸುದ್ದಿಗಳು ಭಾರತೀಯ ರೈಲು ನೀಲಿ, ಕೆಂಪು, ಹಸಿರು ಬೋಗಿಗಳನ್ನು ಏಕೆ ಹೊಂದಿದೆ?

ಭಾರತೀಯ ರೈಲು ನೀಲಿ, ಕೆಂಪು, ಹಸಿರು ಬೋಗಿಗಳನ್ನು ಏಕೆ ಹೊಂದಿದೆ?

ನವದೆಹಲಿ: ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ನಾಲ್ಕು ಸಾರಿಗೆಗಳಲ್ಲಿ ಒಂದಾಗಿದೆ. ಪ್ರತಿದಿನ ಭಾರತದಲ್ಲಿ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ.

ರೈಲುಗಳಲ್ಲಿ ಒಂದೊಂದು ವಿನ್ಯಾಸವೂ ಹಲವು ಅರ್ಥಗಳನ್ನು ಹೊಂದಿದೆ. ರೈಲುಗಳ ಮೇಲಿನ ಸಂಖ್ಯೆಗಳು ಸೇರಿದಂತೆ ಎಲ್ಲದರ ಹಿಂದೆಯೂ ಒಂದು ವಿಶೇಷ ಅರ್ಥವಿದೆ. 80-90ರಶ ದಶಕದಲ್ಲಿ ರೈಲುಗಳೆಂದ್ರೆ ಕೆಂಪು ಬಣ್ಣ. ಆದ್ರೆ ಇಂದು ರೈಲುಗಳ ಬಣ್ಣ ಬೇರೆ ಬೇರೆಯಾಗಿದೆ. ಇಂದು ಸಾಮಾನ್ಯವಾಗಿ ಕೆಂಪು, ನೀಲಿ ಮತ್ತು ಹಸಿರು ಬಣ್ಣದ ರೈಲುಗಳು ಹೆಚ್ಚಾಗಿದೆ ಕಂಡು ಬರುತ್ತವೆ. ವಂದೇ ಭಾರತ್ ರೈಲುಗಳ ಬಿಳಿ-ನೀಲಿ ಮತ್ತು ಬಿಳಿ-ಕೇಸರಿ ಸಂಯೋಜನೆಯಲ್ಲಿದ್ದು, ಇವುಗಳ ವಿನ್ಯಾಸವೂ ಸಹ ಭಿನ್ನವಾಗಿದೆ.


ಕೆಂಪು ಬಣ್ಣದ ಕೋಚ್
ಕೆಂಪು ಬಣ್ಣದ ಡಬ್ಬಿಗಳಿಗೆ ಲಿಂಕ್ ಹಾಫ್ಮೆನ್ ಕೋಚ್ ಎಂದು ಕರೆಯಲಾಗುತ್ತದೆ. ಕೆಂಪು ಕೋಚ್ ಗಳ ನಿರ್ಮಾಣ ಜರ್ಮನಿಯಲ್ಲಾಗಿತ್ತು. 2000ರಲ್ಲಿ ಜರ್ಮನಿಯಿಂದ ಭಾರತಕ್ಕೆ ಕೆಂಪು ಬಣ್ಣದ ಕೋಚ್ ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಸದ್ಯ ಈ ಕೋಚ್ ಗಳ ನಿರ್ಮಾಣ ಪಂಜಾಬ್ ರಾಜ್ಯದ ಕಪೂರಥಲಾ ಎಂಬಲ್ಲಿ ಆಗುತ್ತಿದೆ. ಇವುಗಳು ಅಲ್ಯುಮಿನಿಯಿಂದ ನಿರ್ಮಾಣವಾಗಿರುವ ಕಾರಣ ತೂಕ ಕಡಿಮೆಯಾಗಿರುತ್ತದೆ. ಕೆಂಪು ಬಣ್ಣದ ಕೋಚ್ ಗಳನ್ನು ರಾಜಧಾನಿ/ಶತಾಬ್ಧಿ ಸೇರಿದಂತೆ ದೂರ ಪ್ರಯಾಣದ ಪ್ರೀಮಿಯಂ ಎಕ್ಸ್ಪ್ರೆಸ್ ಗಳಲ್ಲಿ ಬಳಕೆ ಮಾಡಲಾಗುತ್ತದೆ.


ಹಸಿರು ಬಣ್ಣದ ಕೋಚ್
ಹಸಿರು ಬಣ್ಣದ ಕೋಚ್ ಗಳನ್ನ ಗರೀಬ್ ರಥ್ ರೈಲುಗಳಿಗೆ ಬಳಕೆ ಮಾಡಲಾಗುತ್ತದೆ. ಈ ಬಣ್ಣಕ್ಕೆ ಯಾವುದೇ ವಿಶೇಷ ಮಹತ್ವವಿಲ್ಲ. ಬಿನ್ನವಾಗಿ ಕಾಣುವದಕ್ಕಾಗಿ ಮಾತ್ರ ಬೇರೆ ಬಣ್ಣ ಬಳಕೆ ಮಾಡಲಾಗಿದೆ.


ನೀಲಿ ಬಣ್ಣದ ಕೋಚ್
ಭಾರತೀಯ ರೈಲ್ವೆ ಅತಿ ಹೆಚ್ಚು ನೀಲಿ ಬಣ್ಣದ ಕೋಚ್ ಗಳನ್ನು ಹೊಂದಿದೆ. ಇವುಗಳು ಸಂಪೂರ್ಣ ಕಬ್ಬಿಣದಿಂದ ನಿರ್ಮಾಣವಾಗಿದ್ದು, ಗಂಟೆಗೆ 70-140 ಕಿ.ಮೀ. ವೇಗದಲ್ಲಿ ಚಲಿಸುವ ಸಾಮಾರ್ಥ್ಯವನ್ನು ಹೊಂದಿವೆ. ತಮಿಳುನಾಡಿನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನೀಲಿ ಬಣ್ಣದ ಕೋಚ್ಗಳನ್ನು ನಿರ್ಮಿಸಲಾಗುತ್ತದೆ. ನೀಲಿ ಕೋಚ್ಗಳನ್ನು ಎಕ್ಸ್ಪ್ರೆಸ್, ಸೂಪರ್ ಫಾಸ್ಟ್ ಟ್ರೈನ್ ಗಳಲ್ಲಿ ಬಳಸಲಾಗುತ್ತದೆ.

Join Whatsapp
Exit mobile version