Home ಕರಾವಳಿ ಸುರತ್ಕಲ್ ಟೋಲ್ ಅನ್ನು ಹೆಜಮಾಡಿ ಟೋಲ್’ನೊಂದಿಗೆ ವಿಲೀನಗೊಳಿಸಿ ಹೆಚ್ಚುವರಿ ಹಣ ಸಂಗ್ರಹಿಸುವುದು ಯಾವ ನ್ಯಾಯ?: ಜೆಡಿಯು

ಸುರತ್ಕಲ್ ಟೋಲ್ ಅನ್ನು ಹೆಜಮಾಡಿ ಟೋಲ್’ನೊಂದಿಗೆ ವಿಲೀನಗೊಳಿಸಿ ಹೆಚ್ಚುವರಿ ಹಣ ಸಂಗ್ರಹಿಸುವುದು ಯಾವ ನ್ಯಾಯ?: ಜೆಡಿಯು

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ಸಂಗ್ರಹ ರದ್ದು ಮಾಡಿ ಹೆಜಮಾಡಿ ಟೋಲ್’ನಲ್ಲಿ ಸುರತ್ಕಲ್ ಟೋಲ್’ನ ಹಣವನ್ನು ಹೆಚ್ಚುವರಿಯಾಗಿ ಸಂಗ್ರಹ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಜೆಡಿಯು ದಕ್ಷಿಣ ಕನ್ನಡ ಜಿಲ್ಲಾ ಮುಖಂಡ ಸುಪ್ರೀತ್ ಕುಮಾರ್ ಪೂಜಾರಿ ಹೇಳಿದ್ದಾರೆ.


ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಂಗಳೂರು ಬಹು ವಿವಾದ ಕೊಳ್ಳಗಾದ ನಗರದ ಅನಧಿಕೃತ ಸುರತ್ಕಲ್ ಟೋಲ್ ಗೇಟ್ ಹಣ ಸಂಗ್ರಹವನ್ನು ಕೇಂದ್ರ ಸರಕಾರ ರದ್ದುಗೊಳಿಸಿರುವುದು ಸ್ವಾಗತಾರ್ಹ. ಆದರೆ ಸುರತ್ಕಲ್ ಟೋಲ್ ಗೇಟ್ ಹಣ ಸಂಗ್ರಹವನ್ನು ಹೆಜಮಾಡಿ ಟೋಲ್ ಗೇಟ್’ನಲ್ಲಿ ವಿಲೀನಗೊಳಿಸಿ ಅನಧಿಕೃತವಾಗಿ ಹೆಚ್ಚುವರಿ ಟೋಲ್ ಹಣ ಸಂಗ್ರಹವನ್ನೂ ಪಡೆಯಲು ನಿರ್ಧರಿಸಿರುವುದು ವಿಪರ್ಯಾಸವೇ ಸರಿ. ಇದು ಯಾವ ನ್ಯಾಯ? ಹೆದ್ದಾರಿಯಲ್ಲಿ 60 ಕಿ.ಮೀ.ತನಕ ಟೋಲ್ ಗೇಟ್ ಹಣ ಸಂಗ್ರಹವಿಲ್ಲ ಎಂದ ಮೇಲೆ ಸುರತ್ಕಲ್ ಟೋಲ್ ಗೇಟ್ ಹಣ ಸಂಗ್ರಹವನ್ನು ರದ್ದುಗೊಳಿಸಿ ಹೆಜಮಾಡಿಯಲ್ಲಿ ಟೋಲ್ ಗೇಟ್ ನಲ್ಲಿ ಹೆಚ್ಚುವರಿ ಹಣ ಸಂಗ್ರಹಿಸುವುದಾದರೆ ಸುರತ್ಕಲ್ ಟೋಲ್ ಗೇಟ್ ಸಂಗ್ರಹ ರದ್ದು ಗೊಳಿಸುವುದರಲ್ಲಿ ಯಾವ ಅರ್ಥವಿಲ್ಲ ಎಂದು ಅವರು ತಿಳಿಸಿದ್ದಾರೆ.


ಸುರತ್ಕಲ್ ಟೋಲ್’ಗೇಟ್ ನ ಹಣವನ್ನು ವಿಲೀನಗೊಳಿಸಿ ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಗೇಟ್ ದುಬಾರಿ ಹಣ ಸಂಗ್ರಹ ತೆಗೆದುಕೊಳ್ಳುವ ನಿರ್ಧಾರ ಸರಿಯೇ ? ಕೂಡಲೇ ಸುರತ್ಕಲ್ ಟೋಲ್ ಗೇಟ್ ರದ್ದು ಮಾಡಿದ ಮೇಲೆ ಹೆಚ್ಚುವರಿಯಾಗಿ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸುಂಕ ದುಬಾರಿ ಯಾವುದನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಸುರತ್ಕಲ್ ಟೋಲ್ ಗೇಟ್ ರದ್ದತಿಯಿಂದ ಏನು ಪ್ರಯೋಜನವಿಲ್ಲ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version