ಶಿವಮೊಗ್ಗ: ನಾನು ರಾಹುಲ್ ಗಾಂಧಿ ಯಾವ ಜಾತಿ ಎಂದು ನೇರವಾಗಿ ಕೇಳುತ್ತೇನೆ. ಯಾಕೆಂದರೆ ಜನ ಮಿಶ್ರತಳಿ, ಬೆರಕೆ ಎಂದೆಲ್ಲ ಕರೆಯುತ್ತಿದ್ದಾರೆ. ರಾಹುಲ್ ಗಾಂಧಿ ನಿಮ್ಮ ತಾಯಿ ಸೋನಿಯಾ ಗಾಂಧಿ, ನಿಮ್ಮಪ್ಪ ರಾಜೀವ್ ಗಾಂಧಿ ನಿಮ್ಮ ಅಜ್ಜ ಫಿರೋಜ್ ಖಾನ್ ಅವರ ಜಾತಿ ಯಾವುದು ಎಂದು ಮಾಜಿ ಸಚುವ ಈಶ್ವರಪ್ಪ ನಾಲಗೆ ಹರಿಯಬಿಟ್ಟಿದ್ದಾರೆ.
ರಾಹುಲ್ ಗಾಂಧಿ ಒಬಿಸಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ನರೇಂದ್ರ ಮೋದಿ ಅವರಿಗೆ ಅಪಮಾನ ಮಾಡಿದ್ರೆ ನಿಮಗೆ ಇಡಿ ದೇಶ ಕ್ಷಮಿಸಲ್ಲ. ನಿಮಗೆ ಗೌರವ ಸಿಗಬೇಕು ಅಂದ್ರೆ ಕ್ಷಮೆ ಕೇಳಬೇಕು. ಮಾತನಾಡಬೇಕಾದರೆ ಮೈಮೇಲೆ ಎಚ್ಚರ ಇಟ್ಟುಕೊಂಡು ಮಾತನಾಡಬೇಕು ಎಂದು ಅವರು ಹೇಳಿದರು.
ದೇಶದ ವಿಭಜನೆ ಮಾಡಿ ಎಂಬುದಾಗಿ ದ್ರೇಶದ್ರೋಹದ ಹೇಳಿಕೆ ಕೊಡುವವರ ವಿರುದ್ಧ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ರಾಷ್ಟ್ರದ್ರೋಹಿ ಹೇಳಿಕೆ ನೀಡುವವರಿಗೆ ಗುಂಡಿಟ್ಟು ಕೊಲ್ಲುವ ಕಾನೂನು ತರಬೇಕು ಎಂದು ಹೇಳಿದ ನನಗೆ ನೋಟಿಸ್ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನುದಾನ ಕೊಡಲಿಲ್ಲ ಎಂಬ ಕಾರಣಕ್ಕೆ ದೇಶ ವಿಭಜನೆ ಬಗ್ಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್‌ಗೆ ಈವರೆಗೆ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದರು.