Home ಟಾಪ್ ಸುದ್ದಿಗಳು ಪಶ್ಚಿಮ ಬಂಗಾಳದಲ್ಲಿ ಉತ್ತರ ಪ್ರದೇಶದ ಮಾದರಿಯನ್ನು ಅನುಸರಿಸಬೇಕೆ?: ಬಿಜೆಪಿ ಹಿಂಸಾಚಾರದ ಕುರಿತು ಟಿಎಂಸಿ ಸಂಸದೆ

ಪಶ್ಚಿಮ ಬಂಗಾಳದಲ್ಲಿ ಉತ್ತರ ಪ್ರದೇಶದ ಮಾದರಿಯನ್ನು ಅನುಸರಿಸಬೇಕೆ?: ಬಿಜೆಪಿ ಹಿಂಸಾಚಾರದ ಕುರಿತು ಟಿಎಂಸಿ ಸಂಸದೆ

ಕೋಲ್ಕತ್ತಾ: ಟಿಎಂಸಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಕೋಲ್ಕತ್ತಾ ಮತ್ತು ಹೌರಾದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ ಸಚಿವಾಲಯ ಜಾಥಾವು ಹಿಂಸಾಚಾರಕ್ಕೆ ತಿರುಗಿದೆ. ಇದರ ವಿರುದ್ಧ ಟಿಎಂಸಿ ಸರ್ಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಬಿಜೆಪಿ ಮುಖಂಡರ ಮನೆಗಳ ಮೇಲೆ ಬುಲ್ಡೋಝರ್ ಕಾರ್ಯಾಚರಣೆ ನಡೆಸಬೇಕೇ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಪ್ರಶ್ನಿಸಿದ್ದಾರೆ.

ನಿನ್ನೆ ಬಿಜೆಪಿ ನಡೆಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮೂಲಕ್ ಪ್ರತಿಕ್ರಿಯಿಸಿದ ಅವರು, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚುವುದು ಹೇಗೆ ಎಂಬುದನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಮೊದಲು ಅಧ್ಯಾಯ ಕಲಿಸಿದೆ ಎಂದು ಟೀಕಿಸಿದ್ದಾರೆ.

ಉತ್ತರ ಪ್ರದೇಶ ಮಾದರಿಯನ್ನು ಬಂಗಾಳದಲ್ಲಿ ಪ್ರಯೋಗಿಸಿದರೆ ಮತ್ತು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದ ಬಿಜೆಪಿಯವರ ಮನೆಗಳಿಗೆ ಬುಲ್ಡೋಝರ್’ಗಳನ್ನು ಕಳುಹಿಸಿದರೆ ಹೇಗೆ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು, ಸರ್ಕಾರದ ವಿರುದ್ಧ ಮಾತನಾಡುವ ಅಮಾಯಕರ ಆಸ್ತಿಗಳ ಮೇಲೆ ಬುಲ್ಡೋಝರ್ ಹರಿಸಿ ದೌರ್ಜನ್ಯವೆಸಗುತ್ತಿರುವುದನ್ನು ಸಂಸದೆ ಮಹುವಾ ಮೊಯಿತ್ರಾ ನೆನೆದರು.

ಟಿಎಂಸಿ ಸರ್ಕಾರದ ಭ್ರಷ್ಟಚಾರವನ್ನು ವಿರೋಧಿಸುವ ನೆಪದಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ ಜಾಥಾದಲ್ಲಿ ಹಿಂಸಾಚಾರ ಉಂಟಾಗಿದ್ದು, ಬಿಜೆಪಿಯ ಕಾರ್ಯಕರ್ತರು ಪೊಲೀಸರ ವಾಹನಕ್ಕೆ ಬೆಂಕಿ ಹಚ್ಚಿದ ಫೋಟೋವನ್ನು ಸಂಸದೆ ಮೊಯಿತ್ರಾ ಅವರು ಟ್ವೀಟ್’ನಲ್ಲಿ ಹಂಚಿಕೊಂಡಿದ್ದಾರೆ.

Join Whatsapp
Exit mobile version